ETV Bharat / state

ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಲಿ: ಪೇಜಾವರ ಶ್ರೀ - Pejavara Shri statement on cow slaughter Act

ಭಾರತದಲ್ಲಿ ಗೋವುಗಳನ್ನು ಪೂಜಿಸಲಾಗುತ್ತದೆ. ಅಂತಹ ಗೋವುಗಳ ಸಂತತಿಯ ಉಳಿವಿಗೆ ಸರ್ಕಾರ ಕೂಡಲೇ ಬಲವಾಗಿರುವ ಕಾನೂನನ್ನು ಜಾರಿಗೊಳಿಸಬೇಕೆಂದು ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ‌ಆಗ್ರಹಿಸಿದ್ದಾರೆ.

ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
author img

By

Published : Dec 4, 2020, 12:07 PM IST

ಮಂಗಳೂರು: ಅನೇಕ ಸಬೂಬುಗಳನ್ನು ಮುಂದಿಟ್ಟುಕೊಂಡು ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ತಡೆ ತರಲಾಗುತ್ತಿದೆ. ಆದರೆ ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ಶೀಘ್ರ ಜಾರಿಗೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭರತ ಭೂಮಿಯಲ್ಲಿ ಗೋವು ಪರಮ ಪೂಜನೀಯವಾಗಿದ್ದು, ಬದುಕಿಗೆ ಅತ್ಯಂತ ಸಮೀಪವಾಗಿವೆ. ಅಂತಹ ಗೋವುಗಳ ಸಂತತಿಯ ಉಳಿವಿಗೆ ಸರ್ಕಾರ ಕೂಡಲೇ ಬಲವಾಗಿರುವ ಕಾನೂನು ಜಾರಿಗೊಳಿಸಬೇಕೆಂದು‌ ಆಗ್ರಹಿಸುತ್ತೇನೆ ಎಂದರು.

ಇದನ್ನು ಓದಿ: ಬೋಟ್ ದುರಂತ: ಮೀನುಗಾರ ಅನ್ಸಾರ್ ಮೃತದೇಹಕ್ಕಾಗಿ ಮುಂದುವರೆದ ಶೋಧ

ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಇವತ್ತಿನ ಪತ್ರಿಕೆಯೊಂದರಲ್ಲಿ 'ಮಹಿಳೆಯರೇ ಹುಷಾರ್' ಎಂಬ ಎಚ್ಚರಿಕೆಯೊಂದನ್ನು ನೀಡಲಾಗಿದೆ. ಇಂದು ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ವಂಚನೆಗೊಳಗಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ದೈಹಿಕ, ಆರ್ಥಿಕವಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಆದ್ದರಿಂದ ಅನೇಕ ರಾಜ್ಯಗಳು ಕೈಗೊಂಡಿರುವ ಬಲವಾದ ಕಾನೂನಿನಂತೆ ನಮ್ಮ ರಾಜ್ಯವೂ ಕಾನೂನನ್ನು ರಚಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.