ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ದಂಪತಿಯ ಬರ್ಬರ ಹತ್ಯೆ ನಡೆದಿದೆ.
ವಿನ್ಸೆಂಟ್ ಡಿಸೋಜ (48) ಪತ್ನಿ ಹೆಲಿನ್ ಡಿಸೋಜ ಹತ್ಯೆಯಾದವರು. ಪಕ್ಕದ ಮನೆಯವರೊಂದಿಗೆ ಜಾಗದ ವಿಚಾರಕ್ಕಾಗಿ ಗಲಾಟೆ ನಡೆದಿದ್ದು, ನೆರೆಮನೆಯ ಆಲ್ಪನ್ಸ್ ಸಲ್ದಾನ ದಂಪತಿ ಮೇಲೆ ಹಾರೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್ ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.