ಮಂಗಳೂರು: ವಿದ್ಯುತ್ ಶಾಕ್ನಿಂದ ದಂಪತಿ ಮೃತಪಟ್ಟಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ.
ಕೊಕ್ರಾಡಿಯ ಸಂಜೀವ ಮೂಲ್ಯ (55 ) ಮತ್ತು ಸರೋಜಿನಿ (50) ಮೃತ ದಂಪತಿ. ಸ್ವಿಚ್ ಬೋರ್ಡ್ನಲ್ಲಿ ಬೆಂಕಿ ಕಂಡಿದ್ದು, ಸರೋಜಿನಿ ಫ್ಯೂಸ್ ತೆಗೆಯಲು ಹೋಗಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದ್ದರಿಂದ ಅವರು ಕೂಗಿಕೊಂಡಿದ್ದರು. ಇದನ್ನು ಗಮನಿಸಿದ ಪತಿ ಸಂಜೀವ್ ಪತ್ನಿಯ ಸಹಾಯಕ್ಕೆ ಮುಂದಾಗಿದ್ದ ವೇಳೆ ಅವರಿಗೂ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿದ್ಯುತ್ನ ತಾಂತ್ರಿಕ ದೋಷವೇ ಈ ಅನಾಹುತಕ್ಕೆ ಕಾರಣವೆಂದು ಮೇಲ್ನೊಟಕ್ಕೆ ಕಂಡು ಬಂದಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.