ಮಂಗಳೂರು: ನಗರದ ಎನ್ಎಂಪಿಟಿಗೆ 'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು ಬಂದಿದೆ.
ಈ ಬಾರಿ ಎನ್ಎಂಪಿಟಿಗೆ ಬಂದಿರುವ 11ನೇ ಐಷಾರಾಮಿ ಹಡಗು ಇದಾಗಿದೆ. 'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು 1770 ಮಂದಿ ಪ್ರಯಾಣಿಕರು ಹಾಗೂ 786 ಸಿಬ್ಬಂದಿಗಳನ್ನು ಹೊತ್ತು ತಂದಿದೆ. ಹಡಗಿನಲ್ಲಿ ಬಂದಿರುವ ಪ್ರಯಾಣಿಕರು ನಗರದ ದೇವಸ್ಥಾನ, ಚರ್ಚ್, ಮಾರ್ಕೆಟ್ ಹಾಗೂ ಮಾಲ್ಗಳಲ್ಲಿ ಸುತ್ತಾಡಿದರು.
ರಾತ್ರಿ 7:30ಕ್ಕೆ ಮತ್ತೆ ಪ್ರಯಾಣ ಬೆಳೆಸಿರುವ ಈ ಹಡಗು, ಮುಂಬೈನತ್ತ ಸಾಗಿದ್ದು, ಬಳಿಕ ಕೊಚ್ಚಿನ್ ಹಾಗೂ ಮಾಲ್ಡೀವ್ಸ್ನತ್ತ ಪ್ರಯಾಣ ಬೆಳೆಸಲಿದೆ.