ETV Bharat / state

ಇಬ್ಬರು ನ್ಯಾಯಾಧೀಶರಿಗೆ ಕೊರೊನಾ ಸೋಂಕು ದೃಢ - dakshina kannada judge corona

ದಕ್ಷಿಣ ಕನ್ನಡ ಜಿಲ್ಲೆ ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶರಿಗೆ ಹಾಗೂ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಕೊರೊನಾ ಸೋಂಕು ತಗುಲಿರುವುದು ಇಂದು ದೃಢವಾಗಿದೆ.

Corona Positive to Judge in dakshina kannada
ಇಬ್ಬರು ನ್ಯಾಯಾಧೀಶರಿಗೆ ಕೊರೊನಾ ಸೋಂಕು ದೃಢ
author img

By

Published : Sep 15, 2020, 11:25 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ನ್ಯಾಯಾಧೀಶರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಸೋಂಕು‌ ತಗುಲಿದ್ದು, ಇಬ್ಬರೂ 14 ದಿನಗಳ ಕಾಲ ಕ್ವಾರೆಂಟೈನ್​ಗೊಳಗಾಗಿದ್ದಾರೆ.

Corona Positive to Judge in dakshina kannada
ಇಬ್ಬರು ನ್ಯಾಯಾಧೀಶರಿಗೆ ಕೊರೊನಾ ಸೋಂಕು ದೃಢ

ಇಬ್ಬರನ್ನು ಹೋಂ ಐಸೋಲೇಷನ್​ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಸೆ.13ರಂದು ಇಬ್ಬರು ನ್ಯಾಯಾಧೀಶರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು‌. ಇಂದು ಬಂದ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಇಬ್ಬರು ನ್ಯಾಯಾಧೀಶರ ಸಂಪರ್ಕಕ್ಕೆ ಬಂದವರನ್ನ ಕ್ವಾರೆಂಟೈನ್​ಗೊಳಪಡಿಸಲು ನಿರ್ಧರಿಸಲಾಗಿದೆ. ಇಬ್ಬರು ನ್ಯಾಯಾಧೀಶರು ಕರ್ತವ್ಯಕ್ಕೆ ಮರಳುವವರೆಗೂ ನಾಲ್ಕನೆಯ ಹೆಚ್ಚುವರಿ‌ ಜಿಲ್ಲಾ ನ್ಯಾಯಾಲಯ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಕಲಾಪಗಳು ಬೇರೆ ನ್ಯಾಯಾಲಯಗಳಲ್ಲಿ ನಡೆಯಲಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.