ಮಂಗಳೂರು : ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬ್ರಿಟನ್ನಿಂದ ದೇಶಕ್ಕೆ ಬಂದವರಿಗೆ ನಡೆಸಲಾದ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.
ಬ್ರಿಟನ್ನಿಂದ ಮಂಗಳೂರಿಗೆ 57 ಮಂದಿ ಬಂದಿದ್ದರು. ಆದರೆ, ಬ್ರಿಟನ್ನಲ್ಲಿ ಕಾಣಿಸಿಕೊಂಡ ರೂಪಾಂತರಿ ವೈರಸ್ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಲಾಗಿದೆ. ಸದ್ಯ ಎಲ್ಲರಿಗೂ ಕೊರೊನಾ ನೆಗೆಟುವ್ ವರದಿ ಬಂದಿದೆ.
ಡಿಸೆಂಬರ್ 7 ರಂದು 43ಮಂದಿ ಬಂದಿದ್ದರು. ಡಿಸೆಂಬರ್ 21 ಮತ್ತು 23ರಂದು 14 ಮಂದಿ ಬಂದಿದ್ದರು. ಇವರನ್ನು ಗುರುತಿಸಿ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ.