ETV Bharat / state

ತಾಯಿ -ಮಗನಿಗೆ ಕೊರೊನಾ ಸೋಂಕು: ಕಕ್ಕೆಬೆಟ್ಟು-ಶಕ್ತಿನಗರ ಸೀಲ್​ಡೌನ್

author img

By

Published : Apr 27, 2020, 5:14 PM IST

ಕಕ್ಕೆಬೆಟ್ಟು ಶಕ್ತಿನಗರದ ತಾಯಿ - ಮಗನಲ್ಲಿ ಕೊರೊನಾ ಸೋಂಕು ದೃಢಗೊಂಡ ಪರಿಣಾಮ ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್​​ ಆಗಿ ಪರಿವರ್ತಿಸಿ, ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Corona infection for mother-Baby at Manglore
ಕಕ್ಕೆಬೆಟ್ಟು-ಶಕ್ತಿನಗರ ಪ್ರದೇಶ ಸಂಪೂರ್ಣ ಸೀಲ್​ಡೌನ್

ಮಂಗಳೂರು: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಕಕ್ಕೆಬೆಟ್ಟು ಶಕ್ತಿನಗರದ ತಾಯಿ-ಮಗನಲ್ಲಿ ಕೊರೊನಾ ಸೋಂಕು ದೃಢಗೊಂಡ ಪರಿಣಾಮ ಆ ಪ್ರದೇಶವನ್ನು ಕಂಟೇನ್ಮೆಂಟ್​ ಜೋನ್​ ಆಗಿ ಪರಿವರ್ತಿಸಿ, ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಘೋಷಣೆ ಮಾಡಿದ್ದಾರೆ.

ಕಕ್ಕೆಬೆಟ್ಟು, ಶಕ್ತಿನಗರ ಪ್ರದೇಶದಲ್ಲಿ 22 ಮನೆಗಳಿದ್ದು, ನಾಲ್ಕು ಅಂಗಡಿಗಳು ಹಾಗೂ ಒಂದು ಕಚೇರಿ ಇದ್ದು, ಈ ವ್ಯಾಪ್ತಿಯಲ್ಲಿ 120 ಜನರಿದ್ದಾರೆ. ಇದನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ಕಂಟೇನ್ಮೆಂಟ್ ಜೋನ್​ನಿಂದ 5 ಕಿ.ಮೀ. ವ್ಯಾಪ್ತಿಯನ್ನು ಬಫರರ್ ಜೋನ್ ಎಂದು ಘೋಷಣೆ ಮಾಡಲಾಗಿದೆ‌‌.

ಇದರಲ್ಲಿ 4,800 ಮನೆಗಳಿದ್ದು, 1,315 ಅಂಗಡಿಗಳು ಹಾಗೂ 35 ಕಚೇರಿಗಳಿವೆ‌. 73 ಸಾವಿರ ಜನರು ಈ ವ್ಯಾಪ್ತಿಯೊಳಗೆ ಸೇರಿದ್ದಾರೆ.

ಈ ಬಫರ್ ಜೋನ್​​ ಪೂರ್ವದಲ್ಲಿ ವಾಮಂಜೂರು ಜಂಕ್ಷನ್, ಪಶ್ಚಿಮದಲ್ಲಿ ಉರ್ವ ಮಾರ್ಕೆಟ್, ಉತ್ತರದಲ್ಲಿ ಪದವಿನಂಗಡಿ ಹಾಗೂ ದಕ್ಷಿಣದಲ್ಲಿ ಬಂಟ್ಸ್ ಹಾಸ್ಟೆಲ್​ವರೆಗೆ ಇರಲಿದೆ ಎಂದು ದ.ಕ.ಜಿಲ್ಲಾಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.