ಬಂಟ್ವಾಳ: ತಾಲೂಕಿನ 8 ಮಂದಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬಿಜೆಪಿ ಮುಖಂಡರೊಬ್ಬರಿಗೆ ಸೋಂಕು ತಗುಲಿದೆ.
ಕಾಂಗ್ರೆಸ್ನ ಪ್ರಮುಖ ರಾಜಕಾರಣಿಯ ಮನೆಯ ಮೂವರು ಸದಸ್ಯರಿಗೂ ಕೊರೊನಾ ವಕ್ಕರಿಸಿದೆ. ಎಲ್ಲರೂ ಕ್ಷೇಮವಾಗಿರುವುದಾಗಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಇದರಲ್ಲಿ ಕಾಂಗ್ರೆಸ್ನ 82 ವರ್ಷದ ಹಿರಿಯ ರಾಜಕಾರಣಿಯೂ ಸೇರಿದ್ದಾರೆ.
ಉಳಿದಂತೆ ಪಾಣೆಮಂಗಳೂರಿನ ಯುವಕ, ಕುರಿಯಾಳ ಮತ್ತು ವಗ್ಗದ ತಲಾ ಒಬ್ಬ ಯುವತಿ, ಕುಳ ಗ್ರಾಮದ 50 ವರ್ಷದ ವ್ಯಕ್ತಿ ಸೇರಿದ್ದಾರೆ. 90ರ ವೃದ್ಧೆ, 35ರ ಮಹಿಳೆಗೂ ಕೊರೊನಾ ಸೋಂಕು ತಗುಲಿದೆ.