ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 23 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 409ಕ್ಕೆ ಏರಿಕೆಯಾಗಿದೆ.
ಸೌದಿ ಅರೇಬಿಯಾದಿಂದ ಬಂದ 21 ಮಂದಿ ಮತ್ತು ರೋಗಿ ಸಂಖ್ಯೆ-6,618ರ ಸಂಪರ್ಕ ಹೊಂದಿದ್ದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಅದರಲ್ಲಿ 19 ಪುರುಷರು, ಇಬ್ಬರು ಮಹಿಳೆಯರಿದ್ದಾರೆ.
ಜಿಲ್ಲೆಯಲ್ಲಿ ಕಾಣಿಸಿಕೊಂಡ 409 ಸೋಂಕಿತರ ಪೈಕಿ ಎಂಟು ಮಂದಿ ಸಾವನ್ನಪ್ಪಿದ್ದು, 170 ಮಂದಿ ಗುಣಮುಖರಾಗಿದ್ದಾರೆ. 232 ಸಕ್ರಿಯ ಪ್ರಕರಣಗಳಿವೆ.