ETV Bharat / state

ಮಂಗಳೂರು : ಕೊರೊನಾ ಜಾಗೃತಿ ಮೂಡಿಸುತ್ತಿರುವ 'ಕ್ರಿಸ್​ಮಸ್ ನಕ್ಷತ್ರ' - Moodbidre church news

ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸಂದೇಶ ಸಾರುವ ಬೃಹದಾಕಾರದ ಕ್ರಿಸ್​ಮಸ್ ನಕ್ಷತ್ರ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಎಂಬಲ್ಲಿ ಕಂಡುಬರುತ್ತದೆ.

'ಕ್ರಿಸ್​ಮಸ್ ನಕ್ಷತ್ರ'
'ಕ್ರಿಸ್​ಮಸ್ ನಕ್ಷತ್ರ'
author img

By

Published : Dec 23, 2020, 1:52 PM IST

Updated : Dec 23, 2020, 2:26 PM IST

ಮಂಗಳೂರು: ಕೊರೊನಾ ಸೋಂಕು ಮರೆಯಾಗಿದೆ ಎಂದು ಯಾರೂ ಮೈಮರೆಯದೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸಂದೇಶ ಸಾರುವ ಬೃಹದಾಕಾರದ ಕ್ರಿಸ್​ಮಸ್ ನಕ್ಷತ್ರವೊಂದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಎಂಬಲ್ಲಿನ 'ಲೈಫ್ ಸೇವಾ ಸಂಸ್ಥೆ'ಯು ಈ ವಿಶಿಷ್ಟ ಹಾಗೂ ಪರಿಸರ ಸ್ನೇಹಿ ನಕ್ಷತ್ರವನ್ನು ರಚಿಸಿದೆ.

ಕೊರೊನಾ ಜಾಗೃತಿ ಮೂಡಿಸುತ್ತಿರುವ 'ಕ್ರಿಸ್​ಮಸ್ ನಕ್ಷತ್ರ'

ಕಳೆದ 8 ವರ್ಷಗಳಿಂದ ಒಂದಿಲ್ಲೊಂದು ಸಾಮಾಜಿಕ ಸಂದೇಶಗಳ ರಚನೆಯ ಕ್ರಿಸ್​ಮಸ್ ನಕ್ಷತ್ರ ತಯಾರಿಸುವ ಮೂಲಕ ಗಮನ ಸೆಳೆಯುತ್ತಿರುವ 'ಲೈಫ್ ಸೇವಾ ಸಂಸ್ಥೆ'ಯು ಈ ಬಾರಿ ಕೊರೊನಾ ಸೋಂಕು ಜಾಗೃತಿಯ ಜೊತೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಪ್ರಾಮುಖ್ಯತೆ ವಿವರಿಸುವ ಈ ನಕ್ಷತ್ರವನ್ನು ತಯಾರಿಸಿದೆ. ಇದನ್ನು ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಬಿದಿರು ಹಾಗೂ ಬಟ್ಟೆಯ ಮಾಸ್ಕ್, ಮೈದಾಹಿಟ್ಟು ಬಳಸಿ ತಯಾರಿಸಲಾಗಿದೆ. 13 ಅಡಿ ಉದ್ದ ಹಾಗೂ 12 ಅಡಿ ಅಗಲವಿರುವ ಬೃಹದಾಕಾರದ ಈ ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಆವರಣದಲ್ಲಿ ವೀಕ್ಷಿಸಬಹುದು.

ಈ ಕೊರೊನಾ ಜಾಗೃತಿ ನಕ್ಷತ್ರವು ಒಟ್ಟು 30 ಕೆಜಿ ತೂಕವಿದೆ. ಸುಮಾರು 20 ಕೆಜಿ ಬಿದಿರು, 160 ಅಡಿ ಬಿಳಿ ಬಟ್ಟೆ, 40 ಮಾಸ್ಕ್, 5 ಹ್ಯಾಂಡ್ ಸ್ಯಾನಿಟೈಸರ್, 1,200 ಗುಂಡುಸೂಜಿ ಬಳಸಿ ಈ ನಕ್ಷತ್ರವನ್ನು ತಯಾರಿಸಲಾಗಿದೆ. ನಕ್ಷತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಕೊroನಾ ವೈರಸ್ ಆಕೃತಿಯನ್ನು ನಕ್ಷತ್ರದಲ್ಲಿ ಸೇರಿಸಲಾಗಿದೆ.

ಶಿರ್ತಾಡಿಯ ಪ್ರಸನ್ನ ಜೊಯೆಲ್ ಸಿಕ್ವೇರಾ ತನ್ನ ಸ್ನೇಹಿತರಾದ ಯತೀಶ್ ಕುಲಾಲ್ ಶಿರ್ತಾಡಿ ಹಾಗೂ ನವೀನ್ ಶೆಟ್ಟಿ ಶಿರ್ತಾಡಿಯವರ ಜೊತೆಗೂಡಿ ಒಟ್ಟು 8 ದಿನಗಳ ಶ್ರಮದ ಮೂಲಕ ತಯಾರಿಸಿದ್ದಾರೆ.

ನಕ್ಷತ್ರ ತಯಾರಕ ಪ್ರಸನ್ನ ಜೋಯೆಲ್ ಸಿಕ್ವೇರಾ ಮಾತನಾಡಿ, ಕೊರೊನಾ ಸೋಂಕು ಇನ್ನೂ ಜಗತ್ತಿನಿಂದ ಮರೆಯಾಗಿಲ್ಲ. ಹೀಗಿರುವಾಗ ಸಾಲು ಸಾಲು ಹಬ್ಬಗಳನ್ನು ಕಳೆದು ಇದೀಗ ವರ್ಷದ ಕೊನೆಯ ಕ್ರಿಸ್​ಮಸ್ ಸಂಭ್ರಮದಲ್ಲಿದ್ದೇವೆ. ಆದರೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದನ್ನು ಮರೆಯುತ್ತಿರುವ ಸಮಾಜಕ್ಕೆ ಸಂದೇಶ ನೀಡುವುದು ಈ ಬಾರಿಯ ನಕ್ಷತ್ರದ ಉದ್ದೇಶ. ನಕ್ಷತ್ರವನ್ನು ಸಂಪೂರ್ಣ ಪರಿಸರ ಸ್ನೇಹಿ ವಸ್ತುಗಳಿಂದಲೇ ರಚಿಸಲಾಗಿದ್ದು, ಬಟ್ಟೆಯ ಮಾಸ್ಕ್ ಗಳನ್ನು ಪೋಣಿಸಲಾಗಿದೆ. ನಕ್ಷತ್ರದ ನಡುವೆ ಕೊರೋನಾ ಆಕೃತಿ ಹಾಗೂ ಅದರ ಸುತ್ತಲೂ ಸ್ಯಾನಿಟೈಸರ್ ಗಳನ್ನು ಅಳವಡಿಸಲಾಗಿದೆ. ಮುಂಜಾಗರೂಕತೆಯಿಂದ ಒಳಿತು, ಮೈಮರೆವಿನಿಂದ ಕೆಡುಕು ಎಂಬುದು ಈ ಸಲದ ನಕ್ಷತ್ರದ ಸಂದೇಶ ಎಂದು ಹೇಳಿದರು.

Last Updated : Dec 23, 2020, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.