ಮಂಗಳೂರು:ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಸಹಕಾರಿ ಬ್ಯಾಂಕುಗಳು ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶೀನಾಥ್ ಮರಾಠೆ ಅವರು ತಿಳಿಸಿದರು.
ಮಂಗಳೂರಿನ ವಿಶ್ವಕರ್ಮ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಭಾರತೀಯ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ಪರಿಸ್ಥಿತಿಯಲ್ಲಿ ದೇಶದ ಸಹಕಾರಿ ಬ್ಯಾಂಕುಗಳು ಉತ್ತಮ ನಿರ್ವಹಣೆ ದಾಖಲಿಸುವ ಮೂಲಕ ಸುಭದ್ರ ಸ್ಥಿತಿಯಲ್ಲಿದೆ.
ಈ ಸುದ್ದಿಯನ್ನೂ ಓದಿ: ಕ್ಯಾದಿಗುಪ್ಪ ಗ್ರಾ.ಪಂ. ನೂತನ ಸದಸ್ಯರಿಂದ ನಡೆಯಿತು ಸ್ವಚ್ಛತಾ ಕಾರ್ಯ
ದೇಶದಲ್ಲಿನ ಸಹಕಾರಿ ಬ್ಯಾಂಕುಗಳು ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡಿದೆ. ಸಹಕಾರಿ ಬ್ಯಾಂಕುಗಳಲ್ಲಿ ಎನ್ಪಿಎ ಆರ್ ಬಿ ಐ ಮಾನದಂಡದಷ್ಟು ಇರದಿದ್ದರೂ ಬ್ಯಾಂಕ್ಗಳು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದೆ ಎಂದರು. 20 ಸಾವಿರ ಸಹಕಾರಿ ಬ್ಯಾಂಕುಗಳು ಸಹಕಾರ ಭಾರತಿ ಅಧೀನದಲ್ಲಿದೆ. ದೇಶದ 450 ಜಿಲ್ಲೆಗಳಲ್ಲಿ ಸಹಕಾರ ಭಾರತಿ ಕಾರ್ಯನಿರ್ವಹಿಸುತ್ತಿದೆ ಎಂದರು.