ಮಂಗಳೂರು : ಪಶ್ಚಿಮ ವಾಹಿನಿ ನದಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ರಾಜ್ಯದ ಬಜೆಟ್ನಲ್ಲಿಯೇ 500 ಕೋಟಿ ರೂ. ಇರಿಸಲಾಗಿದೆ ಎಂದು ಸಣ್ಣನೀರಾವರಿ ಇಲಾಖೆ ಸಚಿವ ಜೆ ಮಾಧುಸ್ವಾಮಿ ಹೇಳಿದರು.
ಜೊತೆಗೆ ಅಲ್ಲಿ ಎರಡು ಬೆಟ್ಟಗಳ ಮಧ್ಯೆ ತಳುಕು ಹಾಕುತ್ತಿರುವುದರಿಂದ ಸ್ಥಳೀಯರಿಗೆ ಓಡಾಟ ನಡೆಸಲು 3-4 ಕಿ.ಮೀ ಬಳಸಿಕೊಂಡು ಸಂಚಾರ ನಡೆಸಬೇಕಿತ್ತು. ಇದೀಗ ಈ ಕಾಮಗಾರಿ ಮೂಲಕ ಓಡಾಟಕ್ಕೆ ಸುಲಭ ಮಾಡಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಅಡ್ಯಾರ್ನಲ್ಲಿ 170 ಕೋಟಿ ರೂ. ಪ್ರಾಜೆಕ್ಟ್ ಆರಂಭಿಸಲಾಗಿದೆ.
ಅದೇ ರೀತಿ ಉಳಿದ ಕ್ಷೇತ್ರದಲ್ಲಿ 47 ಕೋಟಿ ರೂ. ಕಾಮಗಾರಿ ಆರಂಭಿಸಲಾಗುತ್ತದೆ. ಈ ಬಗ್ಗೆ ಇಂದು ಶಾಸಕರ ಜತೆ ಚರ್ಚೆ ಮಾಡಲಾಗಿದೆ. ಮುಂದೆ ಯಾವ ರೀತಿ ಈ ಹಣವನ್ನು ವಿನಿಯೋಗಿಸಲಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ ಅಂತಾ ಹೇಳಿದರು.
ಕೇಂದ್ರದ 15ನೇ ಹಣಕಾಸು ಯೋಜನೆಯನ್ನು ರಾಜ್ಯಕ್ಕೆ, ಜಿಪಂಗೆ, ಗ್ರಾಪಂಗಳಿಗೆ ಎಂದು ಮೂರು ಭಾಗ ಮಾಡಲಾಗಿದೆ. ಇದನ್ನು ಈಗಾಗಲೇ ಹಂಚಲಾಗಿದೆ. ಆಯಾ ಮಟ್ಟದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ.
ನಾಲ್ಕು ಹಂತಗಳಲ್ಲಿ ನೇರವಾಗಿ ಹಂಚಲಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕಂದಾಯ ನಷ್ಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹ ಆಗದಿದ್ದರೂ ಎಲ್ಲರಿಗೂ ಈಗಾಗಲೇ ಹಣಕಾಸು ಹಂಚಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.