ETV Bharat / state

ತೇಜಸ್ವಿ ಸೂರ್ಯ ನಿವಾಸಕ್ಕೆ ಕಾಂಗ್ರೆಸ್ ಮುತ್ತಿಗೆ ಯತ್ನ : ಕಾರ್ಯಕರ್ತರು ವಶಕ್ಕೆ - MP Tejaswi Surya controversial statement

ಕಾಂಗ್ರೆಸ್ ಸರ್ಕಾರ ಕಲ್ಲು ಹೊಡೆಸಬಹುದಿತ್ತು ಎಂಬ ಆಕ್ಷೇಪಾರ್ಹ ಹೇಳಿಕೆ ಆರೋಪ- ಸಂಸದ ತೇಜಸ್ವಿ ಸೂರ್ಯ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಯತ್ನ- ಪೊಲೀಸರಿಂದ ಕೈ ಕಾರ್ಯಕರ್ತರು ವಶಕ್ಕೆ

congress-workers-protest-agansit-tejaswi-suryas-controversial-statement
ತೇಜಸ್ವಿ ಸೂರ್ಯ ನಿವಾಸಕ್ಕೆ ಕಾಂಗ್ರೆಸ್ ಮುತ್ತಿಗೆ ಯತ್ನ : ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
author img

By

Published : Jul 30, 2022, 5:31 PM IST

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿಕೆ ನೀಡಿದ್ದರೆನ್ನಲಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಿರಿನಗರದಲ್ಲಿರುವ ಸಂಸದರ ನಿವಾಸದತ್ತ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಕಲ್ಲುಗಳನ್ನು ಕೊಟ್ಟು, ಹೊಡೆಸುವಂತೆ ಸವಾಲು ಹಾಕುವ ಪ್ರಯತ್ನ ಮಾಡಿದ್ದಾರೆ.

ತೇಜಸ್ವಿ ಸೂರ್ಯ ನಿವಾಸಕ್ಕೆ ಕಾಂಗ್ರೆಸ್ ಮುತ್ತಿಗೆ ಯತ್ನ : ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

ಜೊತೆಗೆ ಕಲ್ಲು ಹೊಡೆಯುವ ಮನಸ್ಥಿತಿ ಬೇಡ ಎಂದು ತಿಳಿ ಹೇಳಲು ಹೂಗಳನ್ನು ಉಡುಗೊರೆ ನೀಡಲು ಯತ್ನಿಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಅರ್ಧ ದಾರಿಯಲ್ಲೇ ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಅವಕಾಶ ಸಿಗದೆ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆದಿದೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತೆ ಮೀನಾ ಅವರು ಸಂಸದರ ಮನೆಯ ಒಳಗೆ ಹೋಗಿ ಹೂಗಳನ್ನು ಇಟ್ಟು ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಅವರನ್ನೂ ಸಹ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮೀನಾ, ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಸಂಸದರು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಅವರು ನಮಗೆ ಕಲ್ಲು ಹೊಡೆಸಿದರೂ ಪರವಾಗಿಲ್ಲ, ನಾವು ಅವರಿಗೆ ಹೂಗಳನ್ನು ಕೊಡುತ್ತೇವೆ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಯುವ ಘಟಕದ ಪದಾಧಿಕಾರಿಯೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು ಎನ್ನಲಾಗ್ತಿದೆ. ಕಾಂಗ್ರೆಸ್ ಸರ್ಕಾರವಿದ್ದರೆ ನಾವು ಕಲ್ಲು ಹೊಡೆಸಬಹುದಿತ್ತು. ಆದರೆ ಬಿಜೆಪಿ ಸರ್ಕಾರವಿದೆ. ಸಹನೆಯಿಂದ ವರ್ತಿಸಿ ಎಂದು ಕಾರ್ಯಕರ್ತರನ್ನು ಮನವೊಲಿಸುವ ಯತ್ನ ನಡೆಸಿದ್ದರು.

ಓದಿ : ಪ್ರವೀಣ್​ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದು ಪಕ್ಷದಿಂದ: ಬಿ ವೈ ವಿಜಯೇಂದ್ರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.