ETV Bharat / state

ಪ್ರಚೋದನಕಾರಿ ಭಾಷಣ ಆರೋಪ: ಚೈತ್ರಾ ಕುಂದಾಪುರ ವಿರುದ್ಧ ದೂರು - ಸುರತ್ಕಲ್​​​ನ ಬಜರಂಗದಳ

ಸುರತ್ಕಲ್​​​ನ ಬಜರಂಗದಳ, ದುರ್ಗಾವಾಹಿನಿ ಆಯೋಜಿಸಿದ್ದ ಬೃಹತ್ ಜನಜಾಗೃತಿ ಸಭೆಯಲ್ಲಿ ಭಾಷಣದ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪದ ಬಳಸಿದ್ದಾರೆ ಎಂದು ಆರೋಪದಡಿ ದೂರು ದಾಖಲಾಗಿದೆ.

chaitra-kundapura
: ಚೈತ್ರಾ ಕುಂದಾಪುರ
author img

By

Published : Oct 7, 2021, 1:00 PM IST

ಮಂಗಳೂರು: ಸುರತ್ಕಲ್​ನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ದೂರು ದಾಖಲಾಗಿದೆ.

ಭಾಷಣದ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪದಗಳ ಬಳಸಿದ್ದಾರೆ. ಇದರಿಂದ ಕೋಮು ಘರ್ಷಣೆ ಭೀತಿ ಎದುರಾಗಿದೆ ಎಂದು ಚಿತ್ತರಂಜನ್ ಶೆಟ್ಟಿ ಎಂಬುವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಚೋದನಕಾರಿ ಭಾಷಣ ಜೊತೆಗೆ ಕರಾವಳಿಯ ಆರಾಧ್ಯ ದೈವ ಕೋಟಿ ಚೆನ್ನಯರು ಹಿಡಿಯುವ ಸುರಿಯ ಎಂಬ ಆಯುಧವನ್ನು, ತಲವಾರಿಗೆ ಹೋಲಿಸಿರುವುದು ಧಾರ್ಮಿಕ ನಂಬಿಕೆಗೂ ಘಾಸಿ ಉಂಟುಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.