ETV Bharat / state

ಕರಾವಳಿ ಕಾವಲು ಪಡೆ ಸಿಬ್ಬಂದಿಯಿಂದ ಸಮುದ್ರಪಾಲಾಗುತ್ತಿದ್ದ ಯುವತಿಯ ರಕ್ಷಣೆ

ಸೋಮೇಶ್ವರ ಕಡಲ ತೀರದಲ್ಲಿ ಆಟವಾಡುವ ವೇಳೆ ಬೃಹತ್ ಅಲೆ ಅಪ್ಪಳಿಸಿ ಸಮುದ್ರಪಾಲಾಗುತ್ತಿದ್ದ ಯುವತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

girl rescued
ಯುವತಿ ರಕ್ಷಣೆ
author img

By

Published : Jan 12, 2021, 3:43 PM IST

ಉಳ್ಳಾಲ: ಸೋಮೇಶ್ವರ ಕಡಲ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮೂವರು ಯುವತಿಯರು ಸಮುದ್ರದಲ್ಲಿ ಆಟವಾಡುವ ಸಂದರ್ಭ ಬೃಹತ್ ಅಲೆ ಅಪ್ಪಳಿಸಿ ಯುವತಿಯೋರ್ವಳು ಸಮುದ್ರಪಾಲಾಗುತ್ತಿರುವುದನ್ನು ಗಮನಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಸಮವಸ್ತ್ರದಲ್ಲೇ ಸಮುದ್ರಕ್ಕೆ ಹಾರಿ ರಕ್ಷಿಸಿದ್ದಾರೆ.

ಸಮುದ್ರಪಾಲಾಗುತ್ತಿದ್ದ ಯುವತಿಯ ರಕ್ಷಣೆ

ಬೆಂಗಳೂರಿನಿಂದ ಕ್ಯಾಬ್ ಮೂಲಕ ಬಂದಿದ್ದ ಜಯಶ್ರೀ ಮತ್ತು ಕ್ರಿಯಾ ಎಂಬ ಸ್ನೇಹಿತೆಯರ ಜತೆಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಬೊಮ್ಮಸಂದ್ರ ನಿವಾಸಿ ಕೀರ್ತಿ(23) ರಕ್ಷಿಸಲ್ಪಟ್ಟ ಯುವತಿ.

ಓದಿ...ಟ್ರಕ್​ಗೆ ಡಿಕ್ಕಿ ಹೊಡೆದು 8 ಬಾರಿ ಪಲ್ಟಿಯಾದ ಕಾರು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ, ಕಿರಣ್, ಆಂಟನಿ, ಶಿವಪ್ರಸಾದ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಯುವತಿಗೆ ಪ್ರಾರ್ಥಮಿಕ ಚಿಕಿತ್ಸೆ ನೀಡಿ ಬಂದಿದ್ದ ಕ್ಯಾಬ್ ಮೂಲಕ ವಾಪಸ್​ ಕಳುಹಿಸಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.