ಉಳ್ಳಾಲ: ಉಳ್ಳಾಲದ ಎರಡನೇ ಕೊಟ್ಟಾರಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಒತ್ತಾಯಿಸಿ ನಾಗರಿಕ ಸಮಿತಿ ಕೊಟ್ಟಾರ ವತಿಯಿಂದ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನೆರೆಯಾದ ವೇಳೆ ಎರಡನೇ ಕೊಟ್ಟಾರ ಭಾಗದ ರಸ್ತೆ ಹದಗೆಟ್ಟಿದ್ದು, ಅಲ್ಲಿನ ಜನರು ಸಂಚರಿಸಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇದರಿಂದ ಆ ಭಾಗದ ಜನರು ಸಾಕಷ್ಟು ತೊಂದರೆ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ರಸ್ತೆಯನ್ನು ಕೂಡಲೇ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಅಧ್ಯಕ್ಷರಾದ ಯು.ಕೆ ಗೋಪಾಲ್, ಗೌರವಾಧ್ಯಕ್ಷ ಅಹಮ್ಮದ್ ಬಾವಾ ಕೊಟ್ಟಾರ ಉಪಸ್ಥಿತರಿದ್ದರು.