ETV Bharat / state

ಸಾರ್ವಜನಿಕ ಬಳಕೆಗೆ ಬಾರದೆ ಅನಾಥವಾದ ಚಿಂಗಾಣಿಗುಡ್ಡೆ ಬೃಹತ್ ನೀರಿನ ಟ್ಯಾಂಕ್ - ಸಾರ್ವಜನಿಕ ಉಪಯೋಗಕ್ಕೆ ಬಾರದ ಬೃಹತ್ ನೀರಿನ ಟ್ಯಾಂಕ್

ಸುಳ್ಯ ತಾಲೂಕಿನ ಪಂಜ ಗ್ರಾ.ಪಂ ವ್ಯಾಪ್ತಿಯ ಐವತ್ತೊಕ್ಲು ಗ್ರಾಮದ ಚಿಂಗಾಣಿಗುಡ್ಡೆ ಕಳೆದ 7 ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನೀರು ಶುದ್ಧೀಕರಣ ಟ್ಯಾಂಕ್​​ ಅನ್ನು ನಿರ್ಮಿಸಿದೆ. ಆದರೆ ಇದುವರೆಗೆ ಈ ಟ್ಯಾಂಕ್‍ಗೆ ಒಂದು ತೊಟ್ಟು ನೀರು ಬಾರದೆ ಅನುಪಯುಕ್ತವಾಗಿ ಬಿದ್ದಿದೆ.

ಚಿಂಗಾಣಿಗುಡ್ಡೆ ಬೃಹತ್ ನೀರಿನ ಟ್ಯಾಂಕ್
Chingani Gudde water tank
author img

By

Published : Apr 12, 2021, 8:44 AM IST

ಸುಳ್ಯ: ತಾಲೂಕಿನ ಪಂಜ ಸಮೀಪದ ಕೃಷ್ಣನಗರ ಬಳಿಯಲ್ಲಿನ ಚಿಂಗಾಣಿಗುಡ್ಡೆಯಲ್ಲಿ ದೊಡ್ಡ ಮೊತ್ತದ ಹಣ ವ್ಯಯ ಮಾಡಿ ಕಟ್ಟಲಾಗಿರುವ ನೀರಿನ ಟ್ಯಾಂಕ್​ ಇದೀಗ ಯಾವುದೇ ಉಪಯೋಗಕ್ಕೆ ಬಾರದೆ ಹಾಗೆಯೇ ಬಿದ್ದಿದೆ.

ಸಾರ್ವಜನಿಕ ಉಪಯೋಗಕ್ಕೆ ಬಾರದ ಚಿಂಗಾಣಿಗುಡ್ಡೆ ಬೃಹತ್ ನೀರಿನ ಟ್ಯಾಂಕ್

ತಾಲೂಕಿನ ಪಂಜ ಗ್ರಾ.ಪಂ ವ್ಯಾಪ್ತಿಯ ಐವತ್ತೊಕ್ಲು ಗ್ರಾಮದ ಚಿಂಗಾಣಿಗುಡ್ಡೆ ಎಂಬಲ್ಲಿ ಜಿಲ್ಲಾ ಪಂಚಾಯಿತಿ ಸುಮಾರು 20 ಲಕ್ಷ ಅನುದಾನದಲ್ಲಿ ಕಳೆದ 7 ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನೀರು ಶುದ್ಧೀಕರಣ ಟ್ಯಾಂಕ್​​ನ್ನು ನಿರ್ಮಿಸಿದೆ. ಆದರೆ ಇದುವರೆಗೆ ಈ ಟ್ಯಾಂಕ್‍ಗೆ ಒಂದು ತೊಟ್ಟು ನೀರು ಬಿದ್ದಿಲ್ಲ.

ಚಿಂಗಾಣಿಗುಡ್ಡೆ ಅತೀ ಎತ್ತರದ ಪ್ರದೇಶವಾಗಿದ್ದು, ಸುಮಾರು 6 ಕಿ.ಮೀ. ದೂರದ ಪುಳಿಕುಕ್ಕುದಲ್ಲಿರುವ ಕುಮಾರಧಾರ ನದಿಯಿಂದ ಜಾಕ್‍ವೆಲ್ ನಿರ್ಮಿಸಿ ನೀರು ಸರಬರಾಜು ಮಾಡಲು ಪೈಪ್​ಲೈನ್​ ಹಾಕಿ ಪಂಪ್ ಕೂಡ‌ ಅಳವಡಿಸಲಾಗಿದೆ. ದುರಾದೃಷ್ಟವಶಾತ್ ಕಳೆದ ಏಳು ವರ್ಷಗಳು ಕಳೆದರೂ ಟ್ಯಾಂಕ್​ಗೆ ಒಂದು ಲೀಟರ್ ನೀರು ಬಂದಿಲ್ಲ. ಪರಿಣಾಮ ಟ್ಯಾಂಕ್​ ಪಾಳು ಬಿದ್ದಿದ್ದು, ಶಿಥಿಲಗೊಂಡಿದ್ದು ಸುತ್ತಮುತ್ತ ಗಿಡಗಂಟಿ, ಪೊದೆ ಬೆಳೆದಿವೆ.

ಇನ್ನೊಂದೆಡೆ, ಟ್ಯಾಂಕ್​ ಅನ್ನು ಅವೈಜ್ಞಾನಿವಾಗಿ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ಮಾಣದ ಬಿಲ್​​ಗಳಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.