ದಕ್ಷಿಣ ಕನ್ನಡ : ದನ ಮೇಯಿಸಲೆಂದು ತೆರಳಿದ್ದ ಯುವಕನೊಬ್ಬ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಅಲಂಕಾರು ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮದ ಉಜುರುಳಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ ಶಿವಕುಮಾರ್ (17) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ದನ ಮೇಯಿಸಲೆಂದು ಗುಡ್ಡಕ್ಕೆ ತೆರಳಿದ್ದ ಈತ ಹಿಂತಿರುಗದೆ ಕಾಣೆಯಾಗಿದ್ದಾನೆ ಎನ್ನಲಾಗಿದೆ.
ಎಲ್ಲಾ ಕಡೆ ಹುಡುಕಾಡಿದ ಪೋಷಕರು ಮಗ ಕಾಣಿಸದ ಹಿನ್ನೆಲೆ ತನ್ನ ಮಗನನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.