ಬಂಟ್ವಾಳ: ಬುಧವಾರ ಬೆಳಗ್ಗೆ ಇಬ್ಬರು ಮಕ್ಕಳು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಹಿರಿಯ ಪ್ರಾಥಮಿಕ ಶಾಲೆಗೆ ತರಳುತ್ತಿದ್ದಾಗ ಕಾರೊಂದರಲ್ಲಿ ಬಂದ ವ್ಯಕ್ತಿ ಎಳೆದೊಯ್ಯಲು ಯತ್ನಿಸಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮಕ್ಕಳ ಅಂಗಿಯ ಗುಬ್ಬಿಗಳು ಕಿತ್ತು ಹೋಗಿದ್ದರಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ. ಘಟನೆಯ ಕುರಿತು ಮಕ್ಕಳು ತಕ್ಷಣ ಪೋಷಕರಿಗೆ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪುತ್ರ ಸಂತಾನವಿಲ್ಲದ ಉದ್ಯಮಿಗಾಗಿ 8 ತಿಂಗಳ ಮಗು ಕಿಡ್ನಾಪ್.. ಇಬ್ಬರು ಮಹಿಳೆಯರು ಸೇರಿ 7 ಜನರ ಗ್ಯಾಂಗ್ ಅರೆಸ್ಟ್