ETV Bharat / state

ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿ ಚಾರ್ಮಾಡಿ ಘಾಟ್ ರಸ್ತೆ ! ಇನ್ನಾದ್ರೂ ಸರ್ಕಾರ ಇತ್ತ ನೋಡುವುದೇ?

ಕಳೆದ ಬಾರಿ ಸುರಿದ ಮಳೆಯಂತೆ ಈ ಬಾರಿಯೂ ಮಳೆ ಬಂದರೆ ಶಾಶ್ವತವಾಗಿ ಚಾರ್ಮಾಡಿ ಘಾಟ್ ರಸ್ತೆ ಮುಚ್ಚಿ ಹೋಗುವ ಆತಂಕ ನಿರ್ಮಾಣವಾಗಿದೆ.

Charmadi ghat
ಚಾರ್ಮಾಡಿ ಘಾಟ್
author img

By

Published : Jun 20, 2020, 8:10 AM IST

ಬೆಳ್ತಂಗಡಿ(ದ.ಕ): ಮುಂಗಾರು ಮಳೆ ಪ್ರಾರಂಭವಾಗಿದೆ. ಕಾಫಿನಾಡು ಚಿಕ್ಕಮಗಳೂರು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟ್ ಪ್ರವಾಸಿಗರ ಸ್ವರ್ಗ. ರಸ್ತೆಯ ಇಕ್ಕೆಲಗಳಲ್ಲಿ ಜಲಪಾತದಂತೆ ಹರಿಯುವ ಜಲಧಾರೆ, ಮಂಜು ಮುಸುಕಿದ ವಾತಾವರಣ ದೊಡ್ಡ ದೊಡ್ಡ ಬೆಟ್ಟಗಳ ನಡುವೆ ಇರುವ ರಸ್ತೆ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪ್ರಕೃತಿ ರಮಣೀಯ ಸುಂದರವಾದ ಪ್ರದೇಶ. ಈ ಪ್ರದೇಶದ ರಸ್ತೆ ಇದೀಗ ಶಾಶ್ವತವಾಗಿ ಮುಚ್ಚಿ ಹೋಗುವ ಆತಂಕ ಎದುರಾಗಿದೆ.

ಚಾರ್ಮಾಡಿ ಘಾಟ್ ರಸ್ತೆ

ಹೌದು, ಇಲ್ಲಿನ ರಸ್ತೆಗಳ ಇಕ್ಕೆಲಗಳ ಬೆಟ್ಟ ಗುಡ್ಡಗಳು ಅಪಾಯದಂಚಿನಲ್ಲಿವೆ. ಅಪಾಯಕಾರಿ ತಿರುವು ಎಂದು ಪ್ರಸಿದ್ದಿ ಪಡೆದಿರುವ ಚಾರ್ಮಾಡಿ ಘಾಟ್​ನ ಕೆಲವು ಕಡೆ ಇಕ್ಕಟ್ಟಾದ ರಸ್ತೆ, ಆಳವಾದ ಪ್ರಪಾತಗಳಿರುವುದರಿಂದ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕು. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಚಾರ್ಮಾಡಿ ಘಾಟ್ ರಸ್ತೆಯ ಇಕ್ಕೆಲಗಳಲ್ಲೂ ಅಪಾಯಕಾರಿ ಗುಡ್ಡಗಳು ಕುಸಿಯುವ ಭೀತಿಯಲ್ಲಿ ಇದೆ.

ಕಳೆದ ಮಳೆಗಾಲದ ಸಂದರ್ಭದಲ್ಲಿ ಜಲ ಸ್ಫೋಟದಿಂದ ದೊಡ್ಡ ದೊಡ್ಡ ಗುಡ್ಡ ಕುಸಿತ ಉಂಟಾಗಿ, ನೆರೆ ಬಂದು ಬೆಳ್ತಂಗಡಿಯ ಕೆಲವು ಗ್ರಾಮಗಳು ಸಂಕಷ್ಟಕ್ಕಿಡಾಗಿದ್ದವು. ಹಲವರ ಮನೆ, ಕೃಷಿ ಭೂಮಿ ಎಲ್ಲವೂ ನೆರೆಯಿಂದ ಕೊಚ್ಚಿಕೊಂಡು ಹೋಗಿತ್ತು. ಘಾಟ್ ರಸ್ತೆಯ ಗುಡ್ಡ ಕುಸಿತದಿಂದ ಕೆಲವು ತಿಂಗಳುಗಳ ಕಾಲ ಎಲ್ಲ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಸಣ್ಣ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಈಗಲೂ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.

ಆದರೆ, ಈ ಬಾರಿ ಅದಕ್ಕಿಂತಲೂ ಅಪಾಯದ ಸ್ಥಿತಿ ನಿರ್ಮಾಣವಾಗುವ ಸಂಭವ ಹೆಚ್ಚಿದೆ. ಕಾರಣ ಕಳೆದ ಬಾರಿ ಸುರಿದ ಮಳೆಯಂತೆ ಈ ಬಾರಿಯೂ ಮಳೆ ಬಂದರೆ ಶಾಶ್ವತವಾಗಿ ಚಾರ್ಮಾಡಿ ಘಾಟ್ ರಸ್ತೆ ಮುಚ್ಚಿ ಹೋಗುವ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಸರ್ಕಾರದ ಗಮನಕ್ಕೆ ತಂದು ವೈಜ್ಞಾನಿಕವಾಗಿ ಈ ರಸ್ತೆ ಅಭಿವೃದ್ಧಿಪಡಿಸಬೇಕಾಗಿ ಸಾರ್ವಜನಿಕರ ವಿನಂತಿಯಾಗಿದೆ.

ಚಾರ್ಮಾಡಿ ಘಾಟ್ ರಸ್ತೆಯ ಇಕ್ಕೆಲಗಳಲ್ಲಿ 60 ರಿಂದ 70 ಡಿಗ್ರಿ ಹಬ್ಬಿಕೊಂಡಿರುವ ಬೆಟ್ಟಗಳು ತುಂಬಾ ಅಪಾಯಕಾರಿ. ಕಳೆದ ಎರಡು ವರ್ಷಗಳಿಂದಲೂ ಈ ಬೆಟ್ಟಗಳೇ ಕುಸಿತವಾಗಿದ್ದು, ಅಣ್ಣಪ್ಪ ಗುಡಿಯಿಂದ ಮಲಯ ಮಾರುತ ತನಕ ಇಂತಹ ಬೆಟ್ಟಗಳು ಹೆಚ್ಚಾಗಿದ್ದು, ತುಂಬಾ ಅಪಾಯಕಾರಿಯಾಗಿದೆ. ಕಳೆದ ಬಾರಿಯ ಹಾಗೆ ಈ ಬಾರಿಯೂ ಮಳೆ ಸುರಿದಲ್ಲಿ ರಸ್ತೆ ಮುಚ್ಚಿಹೋಗುವ ಅಪಾಯ ಖಂಡಿತ ಇದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕು ಎಂದು ಪರಿಸರವಾದಿ ದಿನೇಶ್ ಹೊಳ್ಳ ತಮ್ಮ ಆತಂಕ ವ್ಯಕ್ತಪಡಿಸಿದರು. ಆದಷ್ಟು ಬೇಗ ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಘಾಟಿ ರಸ್ತೆಗಳ ಬಗ್ಗೆ ಗಮನ ಹರಿಸಿ ಶಾಶ್ವತವಾದ ಪರಿಹಾರವನ್ನು ಮಾಡಿ ಜನರ ಭೀತಿಯನ್ನು ದೂರ ಮಾಡಬೇಕು ಎಂಬುದು ಜನರ ಮನವಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.