ETV Bharat / state

ಡಿಸೆಂಬರ್ ಬಳಿಕ ಪಿಯುನಲ್ಲಿ ಎನ್ ಇ ಪಿ ಪಠ್ಯಕ್ರಮ: ಸಚಿವ ನಾಗೇಶ್ - NEP Syllabus in PU after Dec

ಡಿಸೆಂಬರ್​ ಬಳಿಕ ಪಿಯುನಲ್ಲಿ ಎನ್​ಇಪಿ ಪಠ್ಯಕ್ರಮ- ಕಯ್ಯಾರ ಕಿಞ್ಞಣ್ಣ ರೈ, ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿಲ್ಲ- ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ

chapter-about-kayyar-and-narayanaguru-is-not-excluded-from-textbook
ಕಯ್ಯಾರರ, ನಾರಾಯಣಗುರುಗಳ ಪಠ್ಯ ಕೈಬಿಟ್ಟಿಲ್ಲ, ಡಿಸೆಂಬರ್ ಬಳಿಕ ಪಿಯುವಿನಲ್ಲಿ ಎನ್ ಇ ಪಿ ಪಠ್ಯಕ್ರಮ: ಸಚಿವ ನಾಗೇಶ್
author img

By

Published : Jul 3, 2022, 9:26 PM IST

ಮಂಗಳೂರು: ಗಡಿನಾಡ ಕವಿ ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಾರ್ಶನಿಕ ನಾರಾಯಣ ಗುರುಗಳ ಪಾಠವನ್ನು ಪರಿಷ್ಕೃತ ಪಠ್ಯಕ್ರಮದಲ್ಲಿ ಕೈಬಿಟ್ಟಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ಮಂಗಳೂರಿನ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರ ಸಂಘ, ಚಾಣಕ್ಯ ವಿದ್ಯಾಭಾರತಿ ಆಶ್ರಯದಲ್ಲಿ, ಮಂಗಳೂರು ವಿವಿ ಹಾಗೂ ಜಿಲ್ಲಾ ಪಿಯು ಏರ್ಪಡಿಸಿದ್ದ ' ರಾಷ್ಟ್ರೀಯ ಶಿಕ್ಷಣ ನೀತಿ -2020 ' ಕುರಿತ ಕಾರ್ಯಾಗಾರದ ಸಮಾರೋಪದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಾರಾಯಣ ಗುರುಗಳ ಬಗ್ಗೆ ಐದನೇ ತರಗತಿಯ ಪಠ್ಯದಲ್ಲಿ ಹಿಂದಿಗಿಂತಲೂ ವಿಸ್ತೃತವಾಗಿ ಕಲಿಸಲಾಗುತ್ತದೆ. ಕಯ್ಯಾರ ಕಿಞ್ಞಣ್ಣ ರೈ ಅವರ ವಿಚಾರವನ್ನೂ ಪಠ್ಯದಿಂದ ಕೈಬಿಡಲಾಗಿಲ್ಲ. ಶಿಕ್ಷಣ ಇಲಾಖೆ ಪ್ರಕಟಿಸಿದ ತಜ್ಞರ ಸಮಿತಿಗಳ ಪಠ್ಯಪುಸ್ತಕಗಳ ಪಿಡಿಎಫ್ ಪ್ರತಿಯಿಂದ ಇದನ್ನು ಪರಿಶೀಲಿಸಬಹುದಾಗಿದೆ. ಹೊಸ ಪಠ್ಯಕ್ರಮ ಅಳವಡಿಸುವಾಗ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ( ಎನ್‌ಇಪಿ ) ಯಡಿ ರಾಜ್ಯದಲ್ಲಿನ ಪಿಯು ತರಗತಿಗಳ ಪಠ್ಯಕ್ರಮವನ್ನು ಡಿಸೆಂಬರ್ ನಲ್ಲಿ ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ 1 ರಿಂದ 12 ನೇ ತರಗತಿವರೆಗಿನ ಎನ್​ಇಪಿ ಆಧಾರಿತ ಪಠ್ಯಕ್ರಮವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಜೊತೆಗೆ ಕರ್ನಾಟಕಲ್ಲೂ ಹಂತ ಹಂತವಾಗಿ ಈ ಪಠ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಪದವಿ ಪೂರ್ವ ತರಗತಿಗಳಿಗೆ ಹೊಸ ಶಿಕ್ಷಣ ನೀತಿಯಡಿ ಪಠ್ಯಕ್ರಮ ಅಳವಡಿಸಿ ಡಿಸೆಂಬರ್ ವೇಳೆಗೆ ಅಂತಿಮಗೊಳಿಸಿ ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಓದಿ : ಶಿವಮೊಗ್ಗದಲ್ಲಿ ರೌಡಿ ಪರೇಡ್.. ದುಷ್ಕೃತ್ಯದಲ್ಲಿ ತೊಡಗುವ ರೌಡಿಗಳಿಗೆ ಎಸ್​ಪಿ ಖಡಕ್ ಎಚ್ಚರಿಕೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.