ಮಂಗಳೂರು: ಇಸ್ರೋ ಇತ್ತೀಚೆಗೆ ನಡೆಸಿದ ಚಂದ್ರಯಾನ 2 ಯೋಜನೆ ಯಾವುದೇ ಕಾರಣಕ್ಕೂ ವಿಫಲವಾಗಿಲ್ಲ, ಭವಿಷ್ಯದ ಚಂದ್ರಯಾನಕ್ಕೆ ಇದು ಮುನ್ನುಡಿಯೆಂದು ಮಾಜಿ ಇಸ್ರೋ ಅಧ್ಯಕ್ಷ ಕಸ್ತೂರಿ ರಂಗನ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಚಂದ್ರಯಾನಲ್ಲಿ ನಡೆದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಚಂದ್ರಯಾನವನ್ನು ಯಶಸ್ವಿಗೊಳಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜೊತೆಗೆ, ಈ ಚಂದ್ರಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳ ಕೆಲಸಕ್ಕೆ ಸ್ಫೂರ್ತಿ ನೀಡಿದ್ದು, ನಮ್ಮ ವಿಜ್ಞಾನಿಗಳಿಗೆ ಬಹಳಷ್ಟು ಶಕ್ತಿ ತುಂಬುವ ಕಾರ್ಯವಾಗಿದೆ. ಪ್ರಧಾನಿ ವಿಜ್ಞಾನಿಗಳ ಬೆನ್ನು ತಟ್ಟಿ ಮುಂದಿನ ಕಾರ್ಯಕ್ಕೆ ಸ್ಫೂರ್ತಿ ನೀಡಿದ್ದಾರೆಂದು ಹೇಳಿದರು.