ETV Bharat / state

ಪುತ್ತೂರಿನಲ್ಲಿ ಉಪಯೋಗಕ್ಕೆ ಬಾರದ ಸಿಸಿ ಕ್ಯಾಮರಗಳು: ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು

ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ, ಕಳ್ಳತನ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಹಾಡುಹಗಲೇ ಕಾರುಗಳ ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ, ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ.

author img

By

Published : Dec 15, 2020, 5:35 PM IST

ಪುತ್ತೂರಿನಲ್ಲಿ ಉಪಯೋಗಕ್ಕೆ ಬಾರದ ಸಿಸಿಕ್ಯಾಮರಗಳು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರನ್ನು ಹೊರತುಪಡಿಸಿದರೆ, ಪುತ್ತೂರು ಎರಡನೇ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರವಾಗಿ ಬೆಳೆಯುತ್ತಿದ್ದಂತೆ ಅಪರಾಧ ಕೃತ್ಯಗಳೂ ಈ ಭಾಗದಲ್ಲಿ ಹೆಚ್ಚೆಚ್ಚು ಸಂಭವಿಸುತ್ತಿವೆ. ಅದರಲ್ಲೂ ಕಳ್ಳತನ, ವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೃತ್ಯಗಳನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಪುತ್ತೂರು ನಗರದಾದ್ಯಂತ ಅಳವಡಿಸಲಾಗಿದೆ. ಆದರೆ ಇವುಗಳಲ್ಲಿ ಕೆಲವು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಕಾರು ಕಳುವಾದ ಪ್ರದೇಶಗಳೂ ನಗರದ ಮಧ್ಯದಲ್ಲೇ ಇದ್ದರೂ, ಸರಿಯಾದ ಸಿಸಿ ಕ್ಯಾಮರಾ ಇಲ್ಲದ ಕಾರಣ ಕಳ್ಳರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಹರ ಸಾಹಸವಾಗಿ ಪರಿಣಮಿಸಿದೆ. ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅಪರಿಚಿತ ವಾಹನಗಳು, ದ್ವಿಚಕ್ರ, ಲಘು ವಾಹನಗಳಿಗೆ ಹಿಟ್ ಅಂಡ್ ರನ್ ಮಾಡಿ ಪಲಾಯನ ಮಾಡುವ ಘಟನೆಗಳೂ ಹೆಚ್ಚಾಗುತ್ತಿವೆ. ಈ ಕಡೆಗಳಲ್ಲೂ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ಇಂಥ ಪ್ರಕರಣಗಳನ್ನೂ ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಆಯಕಟ್ಟಿನ ಪ್ರದೇಶಗಳು ಸೇರಿದಂತೆ ಪುತ್ತೂರು ನಗರದೆಲ್ಲಡೆ ಖಾಸಗಿ ಸಹಭಾಗಿತ್ವ ಸೇರಿದಂತೆ ಸರ್ಕಾರಿ ವೆಚ್ಚದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.

ಓದಿ: ಕರಾವಳಿ ಭಾಗದ ಕೈಗಾರಿಕೆಗಳಲ್ಲಿ ಕಾಡುತ್ತಿದೆ ಕಾರ್ಮಿಕರ‌ ಕೊರತೆ

ಪುತ್ತೂರು ನಗರದಲ್ಲಿ ಸುಮಾರು 60 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಈಗಾಗಲೇ ಆಳವಡಿಸಲಾಗಿದೆ. ಇವುಗಳಲ್ಲಿ 46 ಸಿಸಿ ಕ್ಯಾಮರಾಗಳನ್ನು ಪುತ್ತೂರು ನಗರಸಭೆ, ಪೊಲೀಸ್ ಇಲಾಖೆ ಅನುದಾನದಲ್ಲಿ ಅಳವಡಿಸಲಾಗಿದೆ. 14 ಸಿಸಿ ಕ್ಯಾಮರಾಗಳು ಖಾಸಗಿಯವರ ಸಹಕಾರದಲ್ಲಿ ಅಳವಡಿಸಲಾಗಿದೆ. ಈಗಿರುವ ಸಿಸಿ ಕ್ಯಾಮರಾಗಳಲ್ಲಿ ಅರ್ಧದಷ್ಟು ಸರಿಯಾಗಿಲ್ಲ. ಅದರಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಕೆಯಾದ ಸಿಸಿ ಕ್ಯಾಮರಾಗಳು ಸರಿಯಾಗಿ ನಿರ್ವಹಣೆಯಿಲ್ಲದೆ ಅನುಪಯುಕ್ತವಾಗಿವೆ. ಪುತ್ತೂರು ನಗರದಲ್ಲಿ ನೈರ್ಮಲ್ಯೀಕರಣವನ್ನು ಕಾಪಾಡುವ ಉದ್ದೇಶಕ್ಕೂ ಸಿಸಿ ಕ್ಯಾಮರಾಗಳನ್ನು ಬಳಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.