ETV Bharat / state

ಮಂಗಳೂರು: ಮನೆಯವರಿಗೆ ತಲವಾರ್​ ತೋರಿಸಿ ಜಾನುವಾರು ಕದ್ದೊಯ್ದ ನಾಲ್ವರು ಅಂದರ್

ಆರೋಪಿಗಳು ನಿನ್ನೆ ನಸುಕಿನ ವೇಳೆ 4.30 ಸುಮಾರಿಗೆ ನಗರದ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿ ಬಳಿಯ ಮನೆಯೊಂದರ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಕದ್ದೊಯ್ದಿದ್ದರು.

ಜಾನುವಾರು ಕದ್ದೊಯ್ದ ನಾಲ್ವರು ಅಂದರ್
ಜಾನುವಾರು ಕದ್ದೊಯ್ದ ನಾಲ್ವರು ಅಂದರ್
author img

By

Published : Dec 4, 2021, 4:34 PM IST

ಮಂಗಳೂರು: ಮನೆಯವರಿಗೇ ತಲವಾರ್​ ತೋರಿಸಿ ಜಾನುವಾರು ಕದ್ದೊಯ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿರುವ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಉಳ್ಳಾಲ ನಿವಾಸಿ ಮೊಹಮ್ಮದ್ ಸಲೀಂ(32), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ತಂಝಿಲ್(25), ಉಳ್ಳಾಲ ಕೋಡಿ ನಿವಾಸಿ ಮೊಹಮ್ಮದ್ ಇಕ್ಬಾಲ್(24), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ಅಫ್ರೀನ್ ಬಂಧಿತ ಆರೋಪಿಗಳು.

ಪ್ರಕರಣದ ಕುರಿತು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ಮಾಹಿತಿ

ಆರೋಪಿಗಳು ನಿನ್ನೆ ನಸುಕಿನ ವೇಳೆ 4.30 ಸುಮಾರಿಗೆ ನಗರದ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಸಿಟಿ ಬಳಿಯ ಮನೆಯೊಂದರ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನ ಕದ್ದೊಯ್ದಿದ್ದರು. ಕೂಳೂರು ಮಲರಾಯ ದೈವಸ್ಥಾನ ಬಳಿಯ ನಿವಾಸಿ ಉಮೇಶ್ ಎಂಬವರಿಗೆ ಸೇರಿದ ಈ ಹಸುಗಳನ್ನು ಅವರು ಮನೆಯ ಪಕ್ಕದಲ್ಲೇ ಕಟ್ಟಿ ಹಾಕಿದ್ದರು.‌ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಆಗಮಿಸಿದ ಆಗಂತುಕರು ಮೂರು ದನಗಳನ್ನು ಸ್ಕಾರ್ಪಿಯೋ ವಾಹನಕ್ಕೆ ಬಲವಂತವಾಗಿ ತುಂಬಿಸಿದ್ದರು.

ಈ ಸಂದರ್ಭದಲ್ಲಿ ಮನೆಯವರಿಗೆ ತಿಳಿದು ಅವರು ಬೊಬ್ಬೆಯಿಟ್ಟು ಆಗಮಿಸಿದಾಗ ತಲವಾರ್​ ತೋರಿಸಿ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಇಂದು ನಾಲ್ವರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿರುವ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ದನ ಕಳವು ಮಾಡುತ್ತಿರುವುದನ್ನೇ ದಂಧೆಯಾಗಿ ಮಾಡಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಜಾನುವಾರು ಕಳವು ಕೃತ್ಯದಲ್ಲಿ ಇವರೊಂದಿಗೆ ಇನ್ನೂ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶೂಟಿಂಗ್​ ಸ್ಥಳದಲ್ಲಿ ಬೈಕ್ ಡಿಕ್ಕಿ: ಗಾಯಗೊಂಡ ಬೆಂಗಾಲಿ ನಟಿ ಪ್ರಿಯಾಂಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.