ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಸವಾರಿ ಮಂಟಪದ ಸಮೀಪ ಪಾರ್ಕಿಂಗ್ ಮಾಡಿದ್ದ ಓಮ್ನಿ ಕಾರು ಕಳವಾದ ಘಟನೆ ಶನಿವಾರ ನಡೆದಿದೆ.
ಬೆಳ್ತಂಗಡಿಯ ಬಳ್ಳಮಂಜದ ಗಣೇಶ್ ಶೆಟ್ಟಿ ಎಂಬವರು ತಮ್ಮ ಕುಟುಂಬದೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಓಮ್ನಿಯನ್ನು (KA 21, P 1467) ಸುಬ್ರಹ್ಮಣ್ಯದ ಸವಾರಿ ಮಂಟಪದ ಸಮೀಪ ನಿಲ್ಲಿಸಿ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ ಬಂದು ನೋಡಿದಾಗ ಕಾರು ಇರಲಿಲ್ಲ.
ಹುಡುಕಾಡಿದರೂ ಕಾರು ಪತ್ತೆಯಾಗದ ಕಾರಣ ನಕಲಿ ಕೀಯನ್ನು ಬಳಸಿ ಕಳ್ಳರು ಕಾರನ್ನು ಕಳವು ಮಾಡಿದ್ದಾರೆ ಎಂದು ಗಣೇಶ್ ಶೆಟ್ಟಿಯವರು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.