ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನುಷ್ಠಾನಗೊಂಡಿರುವ ಐರಾವತ ಯೋಜನೆಯಡಿ ಕೊಡಮಾಡುವ ವಾಹನಗಳಿಗೆ ಸಬ್ಸಿಡಿ ಮೊತ್ತದ ಮಂಜೂರಾತಿ ಪತ್ರವನ್ನು ಏಳು ಮಂದಿ ಫಲಾನುಭವಿಗಳಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿತರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಸಬ್ಸಿಡಿ ಮೊತ್ತದಲ್ಲಿ ಈ ವಾಹನಗಳನ್ನು ಐರಾವತ ಯೋಜನೆಯಡಿ ನೀಡಲಾಯಿತು. ಈ ವಾಹನಗಳಿಗೆ 5 ಲಕ್ಷ ರೂ. ಸಬ್ಸಿಡಿ ಮೊತ್ತವಿದ್ದು, 1 ಲಕ್ಷ ರೂ. ಹಣಕಾಸು ಸಂಸ್ಥೆಯಿಂದ ಸಾಲ ನೀಡಲಾಗಿದೆ. ಇದರಲ್ಲಿ 25 ಸಾವಿರ ರೂ. ಫಲಾನುಭವಿ ನೀಡಬೇಕಾಗುತ್ತದೆ.
ಈ ಮೂಲಕ ಫಲಾನುಭವಿಗಳು ಸೌಲಭ್ಯಗಳನ್ನು ಸದುಪಯೋಗ ಮಾಡಿ ಸ್ವಂತ ಉದ್ಯೋಗದೊಂದಿಗೆ ಕುಟುಂಬ ನಿರ್ವಹಣೆ ಮಾಡಲಿ ಎಂಬುದು ಸರಕಾರದ ಉದ್ದೇಶ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.