ETV Bharat / state

ಮಂಗಳೂರಿನಲ್ಲಿ ಸಿಎಫ್ಐ ಗರ್ಲ್ಸ್​ ಕಾನ್ಫರೆನ್ಸ್​: ಅನುಮತಿ ನೀಡದಿದ್ದರೂ ರ‍್ಯಾಲಿಗೆ ಯತ್ನ, ಪೊಲೀಸರಿಂದ ತಡೆ - ಮಂಗಳೂರಿನಲ್ಲಿ ಸಿಎಫ್ಐ ರ‍್ಯಾಲಿ ತಡೆದ ಪೊಲೀಸರು

ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಗರ್ಲ್ ಕಾನ್ಪರೆನ್ಸ್ ಆಯೋಜನೆ ಹಿನ್ನೆಲೆಯಲ್ಲಿ ಬಂದೋಬಸ್​ಗಾಗಿ 500 ಪೊಲೀಸರನ್ನು ನಿಯೋಜಿಸಲಾಗಿದೆ.

campus-front-of-india-held-girls-conference-in-mangaluru
ಮಂಗಳೂರಿನಲ್ಲಿ ಸಿಎಫ್ಐ ಗರ್ಲ್ಸ್​ ಕಾನ್ಫರೆನ್ಸ್​: ಅನುಮತಿ ನೀಡದಿದ್ದರೂ ರ‍್ಯಾಲಿಗೆ ಯತ್ನ, ಪೊಲೀಸರಿಂದ ತಡೆ
author img

By

Published : Jul 16, 2022, 6:26 PM IST

ಮಂಗಳೂರು: ಮಂಗಳೂರಲ್ಲಿ ಇಂದು ಕ್ಯಾಂಪಸ್​ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ದಿಂದ ಗರ್ಲ್ಸ್ ಕಾನ್ಫರೆನ್ಸ್ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೂ ಮುನ್ನ ಅನುಮತಿ ಪಡೆಯದೆ ರ‍್ಯಾಲಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ರ‍್ಯಾಲಿಯನ್ನು ತಡೆದರು.

ನಗರದ‌ ಪುರಭವನದಲ್ಲಿ ಸಿಎಫ್ಐ ಕಾನ್ಫರೆನ್ಸ್ ಆಯೋಜಿಸಿತ್ತು. ಇದರ ಅಂಗವಾಗಿ ಜ್ಯೋತಿ ಸರ್ಕಲ್​ನಿಂದ‌ ಪುರಭವನದವರೆಗೆ ರ‍್ಯಾಲಿ ಮಾಡಲು ನಿರ್ಧರಿಸಲಾಗಿತ್ತು. ಕಾನ್ಫರೆನ್ಸ್​ಗೆ ಅನುಮತಿ ಕೊಟ್ಟಿದ್ದ ಪೊಲೀಸರು, ರ‍್ಯಾಲಿ ನಡೆಸಲು ಅವಕಾಶ ನೀಡಿರಲಿಲ್ಲ. ಆದರೂ, ನಗರದ ಮಿಲಾಗ್ರಿಸ್ ಪಕ್ಕದ ಮಸೀದಿ ಬಳಿ ಸುಮಾರು 500 ವಿದ್ಯಾರ್ಥಿನಿಯರು ಸೇರಿ ರ‍್ಯಾಲಿ ನಡೆಸಲು ಯತ್ನಿಸಿದ್ದರು. ಹೀಗಾಗಿ ಪೊಲೀಸರು ತಡೆದು ಎಚ್ಚರಿಕೆ ನೀಡಿದ ನಂತರ ಇದನ್ನು ಕೈಬಿಡಲಾಯಿತು. ನಂತರ ವಿದ್ಯಾರ್ಥಿನಿಯರನ್ನು ಬಸ್ ​ಮೂಲಕ ಕಾರ್ಯಕ್ರಮ ನಡೆಯುವ ಪುರಭವನಕ್ಕೆ ತಂದು ಬಿಡಲಾಯಿತು.

ಮಂಗಳೂರಿನಲ್ಲಿ ಸಿಎಫ್ಐ ಗರ್ಲ್ಸ್​ ಕಾನ್ಫರೆನ್ಸ್​: ಅನುಮತಿ ನೀಡದಿದ್ದರೂ ರ‍್ಯಾಲಿಗೆ ಯತ್ನ, ಪೊಲೀಸರಿಂದ ತಡೆ

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಕಾನ್ಫರೆನ್ಸ್​ ನಡೆಸಲು ಅನುಮತಿ ಕೊಡಲಾಗಿತ್ತು. ರ‍್ಯಾಲಿಗೂ ಅನುಮತಿ ಕೇಳಿದ್ದರು. ಆದರೆ ಅನುಮತಿ ನೀಡಿರಲಿಲ್ಲ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ಸರ್ಕಲ್​ನಿಂದ ರ‍್ಯಾಲಿ ನಡೆಸುವ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ರ‍್ಯಾಲಿಗೆ ಪೂರ್ವ ಅನುಮತಿ ಇಲ್ಲದ ಕಾರಣ ನಡೆಸಲು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ, ರ‍್ಯಾಲಿಗೆ ನಾಲ್ಕೈದು ಜನ ಅಪ್ರಾಪ್ತ ಬಾಲಕಿಯರು ಬಂದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಪೋಷಕರೊಂದಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು ಎಂದರು.

ಸಿಎಫ್ಐ ಕಾರ್ಯಕರ್ತೆ ಫಾತಿಮಾ ಮಾತನಾಡಿ, ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ದನಿಯೆತ್ತಲು ಗರ್ಲ್ಸ್ ಕಾನ್ಫರೆನ್ಸ್ ಆಯೋಜಿಸಲಾಗಿತ್ತು. ಬರೇ ಒಂದು ತುಂಡು ಬಟ್ಟೆಯ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣವನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೇ, ಮುಸ್ಲಿಂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಲಾಗುತ್ತದೆ. ಇದನ್ನು ಖಂಡಿಸಿ ನಾವು ಸಿಎಫ್ಐ ಈ ಕಾನ್ಫರೆನ್ಸ್ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ: ಮಾಜಿ ಸಚಿವ ಯುಟಿ ಖಾದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.