ETV Bharat / state

ರಾಮ ಮಂದಿರ ವಿರೋಧಿಸುವವರು ರಾವಣನ ಪಕ್ಷದವರಾಗುತ್ತೀರಿ‌: ಕೇಂದ್ರ ಸಚಿವ ಸದಾನಂದ ಗೌಡ

author img

By

Published : Feb 20, 2021, 11:51 AM IST

Updated : Feb 20, 2021, 12:16 PM IST

ನರೇಂದ್ರ ಮೋದಿಯವರು ಈ ಬಗ್ಗೆ ಎಲ್ಲಿಯೂ ಗೊಂದಲ ನಿರ್ಮಾಣವಾಗದಂತೆ ಸಮಂಜಸವಾಗಿ ಕೊಂಡೊಯ್ಯುತ್ತಿದ್ದಾರೆ‌. ನಾವೇನು ಹಿಂದೂಗಳೆಂದು ರಾಮನ ಆರಾಧನೆ ಮಾಡುತ್ತಿಲ್ಲ. ಈ ದೇಶದ ಆದರ್ಶ ಪುರುಷ ರಾಮನೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಮ್ಮ ವಿರೋಧಿಗಳೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

Cabinet minister Sadanand gouda statement on Ram mandir
ಕೇಂದ್ರ ಸಚಿವ ಸದಾನಂದಗೌಡ

ಮಂಗಳೂರು: ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರು ರಾವಣನ ಪಕ್ಷದವರಾಗುತ್ತೀರಿ‌. ಈಗಾಗಲೇ ಕಾಂಗ್ರೆಸ್ ಕುಂಭಕರ್ಣನ ಹಂತದಲ್ಲಿದೆ. ನೀವು ಅದೇ ಆಗುತ್ತೀರಾ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ

ಕಾಂಗ್ರೆಸ್​ನಿಂದ ಏನೂ ಮಾಡಲು ಸಾಧ್ಯವಿಲ್ಲ. ಹಿಂದೆ ಲಂಕೆಯಲ್ಲಿಯೂ ವಿಭೀಷಣ ಎಂಬವನೊಬ್ಬನಿದ್ದ. ಅವನು ಏನು ಮಾಡಿದ್ದ ಎಂದು ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದ ಕಾಂಗ್ರೆಸ್ ಸ್ವಲ್ಪ ಅರ್ಥಮಾಡಿಕೊಂಡು ತಮ್ಮ ಕೆಲಸ ಮಾಡಲಿ. ಬರೀ ಟೀಕೆ, ಪ್ರಹಾರ, ಮೇಜು ಗುದ್ದುವುದರಿಂದ ಯಾವುದೇ ಸಾಮಾಜಿಕ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಟಾಂಗ್​ ಕೊಟ್ಟರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ಅತ್ಯಂತ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಯಾರೊಂದಿಗೂ ವೈಷಮ್ಯ ಇಟ್ಟುಕೊಂಡಿಲ್ಲ. ದೇಶದಲ್ಲಿ ಎಲ್ಲಿಯೂ ಕಲ್ಲು ತೂರಾಟ ನಡೆದಿಲ್ಲ. ನರೇಂದ್ರ ಮೋದಿಯವರು ಈ ಬಗ್ಗೆ ಎಲ್ಲಿಯೂ ಗೊಂದಲ ನಿರ್ಮಾಣವಾಗದಂತೆ ಸಮಂಜಸವಾಗಿ ಕೊಂಡೊಯ್ಯುತ್ತಿದ್ದಾರೆ‌. ನಾವೇನು ಹಿಂದೂಗಳೆಂದು ರಾಮನ ಆರಾಧನೆ ಮಾಡುತ್ತಿಲ್ಲ. ಈ ದೇಶದ ಆದರ್ಶ ಪುರುಷ ರಾಮನೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಮ್ಮ ವಿರೋಧಿಗಳೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಕೆಲಸ ಮಾಡುತ್ತಿದ್ದೇವೆ. ಶ್ರೀರಾಮಮಂದಿರ ನಿರ್ಮಾಣದಿಂದ ರಾಜಕೀಯ ವ್ಯತ್ಯಾಸಗಳಾಗಬಹುದು ಎಂದು ವಿರೋಧಿಗಳು ತಿಳಿದುಕೊಂಡಿದ್ದಾರೆ. ಆದರೆ ಆ ತರಹ ಏನೂ ಆಗೋದಿಲ್ಲ‌. ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಬಂದು ಇದರೊಂದಿಗೆ ಕೈ ಜೋಡಿಸಿದಲ್ಲಿ ರಾಮನ ಆಶೀರ್ವಾದ ದೊರಕಬಹುದು ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ, ಕೇರಳ ಗಡಿ ಬಳಿಯ ರಾಜ್ಯದ 10 ಜಿಲ್ಲೆಗಳಲ್ಲಿ ತೀವ್ರ ನಿಗಾ: ಸಚಿವ ಸುಧಾಕರ್

ಆರ್​ಎಸ್ಎಸ್ ಈ ದೇಶದ ಆಚಾರ, ವಿಚಾರಗಳನ್ನು ಉಳಿಸಿಕೊಡುವಂತಹ ಪ್ರಯತ್ನ ಮಾಡುತ್ತಿರುವ ಅತ್ಯಂತ ದೊಡ್ಡ ಸಂಸ್ಥೆ. ಅದಿಲ್ಲದಿದ್ದಲ್ಲಿ ಭಾರತ ಯಾವತ್ತೋ, ಯಾರದೋ ಕೈ ವಶವಾಗುತ್ತಿತ್ತು. ಆಮೆ ನಡಿಗೆಯಿಂದ ಆರ್​ಎಸ್ಎಸ್ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದೆ. ಅದರಿಂದ ನಾವು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

Last Updated : Feb 20, 2021, 12:16 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.