ಉಳ್ಳಾಲ : ಸೊಮವಾರ ರಾತ್ರಿ ದುಬ್ಯೆಗೆ ತೆರಳುತ್ತೇನೆ ಎಂದು ಮನೆಯಲ್ಲಿ ಹಾಗೂ ಸ್ನೇಹಿತರ ಬಳಿ ಹೇಳಿ ನಾಪತ್ತೆಯಾಗಿದ್ದ ಉದ್ಯಮಿಯ ಶವ ಸೋಮೇಶ್ವರ ಸಮುದ್ರ ತೀರದಲ್ಲಿ ದೊರೆತಿದೆ.
ತೊಕ್ಕೊಟು ಪರಿಸರದಲ್ಲಿ ಪ್ಲಾನಿಂಗ್ ಪ್ಯಾಲೇಸ್ ಎಂಬ ಸಿವಿಲ್ ಇಂಜಿನಿಯರ್ ಕಚೇರಿ ಹೊಂದಿದ್ದ ಸುರೇಶ್ ಎಂಬುವರು ತಮ್ಮ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿ ಎರಡನೆಯ ವಿವಾಹ ಆಗಿದ್ದರು.
ಇತ್ತೀಚಿಗೆ 2ನೇ ಪತ್ನಿ ಜೊತೆ ವಿರಸ ಉಂಟಾಗಿದ್ದರಿಂದಾಗಿ ತೀವ್ರವಾಗಿ ನೊಂದಿದ್ದರು. ಸೊಮವಾರ ಸಂಜೆ ಸಮುದ್ರ ತೀರದಲ್ಲಿ ಚಪ್ಪಲಿ ಪತ್ತೆಯಾಗಿದ್ದು. ಇಂದು ಸಮುದ್ರ ತೀರದಲ್ಲಿ ಶವ ದೊರೆತಿದೆ.