ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ಲೈನ್ಗಳಿಂದ ಮನೆ, ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ ವಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್ನಿಂದ ವಿದ್ಯುತ್ ಪ್ರಸರಣ ಲೈನ್ಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಮೆಸ್ಕಾಂನಿಂದ ಇರುವ ವಿದ್ಯುತ್ ಪ್ರಸರಣ ಲೈನ್ಗಳು ಹೈ ವೋಲ್ಟೇಜ್ ಲೈನ್ಗಳಲ್ಲ. ಕೆಪಿಟಿಸಿಎಲ್ನಿಂದ ಕಾರ್ಯನಿರ್ವಹಿಸುವ ಹೈ ವೋಲ್ಟೇಜ್ ಲೈನ್ಗಳ ಬಗ್ಗೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 110 ಮತ್ತು 220 ಕೆವಿ ಲೈನ್ಗಳು ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಸುತ್ತಲೂ ಮನೆ, ಕಟ್ಟಡ ನಿರ್ಮಾಣ ಮಾಡುವುದಿದ್ದರೆ ಕೆಪಿಟಿಸಿಎಲ್ ನಿಯಮಾವಳಿ ಪಾಲಿಸಬೇಕಾಗುತ್ತದೆ. 110 ಕೆ ವಿ ವಿದ್ಯುತ್ ಪ್ರಸರಣ ಲೈನ್ನ ಎರಡು ಭಾಗದಲ್ಲಿ 11 ಮೀಟರ್ ಮತ್ತು 220 ಕೆವಿ ವಿದ್ಯುತ್ ಪ್ರಸರಣ ಲೈನ್ನ ಎರಡು ಭಾಗದಲ್ಲಿ 17.5 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಪಿಟಿಸಿಎಲ್ನಿಂದ ಎನ್ಓಸಿ ಪಡೆದು ಮನೆ ಸೇರಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಿನ ಜಾರಿಗೆ ಕೆಪಿಟಿಸಿಎಲ್ ಕ್ರಮ ವಹಿಸುತ್ತಿದೆ. ಈ ನಿಯಾಮವಳಿಗಳನ್ನು ಮೀರಿರುವ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ.
ಭೂಗತ ಕೇಬಲ್ ಅಳವಡಿಕೆಗೆ ಬೇಡಿಕೆ: ಇನ್ನೂ ಕಂಬಗಳ ಮೂಲಕ ವಿದ್ಯುತ್ ಪ್ರಸರಣ ಮಾಡುವ ಬದಲಿಗೆ ಭೂಗತ ಕೇಬಲ್ ಅಳವಡಿಸಿ ಪ್ರಸರಣ ಮಾಡಿದರೆ ದೊಡ್ಡ ಪ್ರಮಾಣದ ಅಪಾಯವಿಲ್ಲ. ಇಂತಹ ಬೇಡಿಕೆ ಜನರಲ್ಲಿ ಇದೆಯಾದರೂ ಅದು ಭಾರಿ ವೆಚ್ಚದಾಯಕ ಪ್ರಕ್ರಿಯೆಯಾಗಿರುವುದರಿಂದ ಕೆಲವೇ ಕೆಲವು ಪ್ರದೇಶದಲ್ಲಿ ಇಂತಹ ಕಾರ್ಯ ನಡೆದಿದೆ.
ಆರೋಗ್ಯಕ್ಕೆ ಅಪಾಯಕಾರಿಯಲ್ಲ: ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಲೈನ್ಗಳು ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಇದರಲ್ಲಿ ಯಾವುದೇ ರೇಡಿಯೇಷನ್ ಘಟನೆಗಳು ನಡೆದರೆ 25 ಮಿಲಿ ಸೆಕೆಂಡ್ನೊಳಗೆ ಟ್ರಿಪ್ ಆಗುವ ವ್ಯವಸ್ಥೆ ಇಲಾಖೆಯಲ್ಲಿದೆ. ಈ ಕಾರಣದಿಂದ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಈ ವಿದ್ಯುತ್ ಪ್ರಸರಣ ಲೈನ್ಗಳಲ್ಲಿ ಇರುತ್ತದೆ.
ಇದನ್ನೂ ಓದಿ: ಸಿಡಿ ಲೇಡಿ ಪ್ರತ್ಯಕ್ಷವಾದಾಗ ಸತ್ಯ ಬಹಿರಂಗ: ಸಚಿವ ಸುರೇಶ್ ಕುಮಾರ್
ಇನ್ನು ಈ ಬಗ್ಗೆ ಈಟಿವಿ ಭಾರತ ವರದಿಗಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾಹಿತಿ ಕೊಡಲು ನಿರಾಕರಿಸಿದ್ದಾರೆ.