ಬೆಳ್ತಂಗಡಿ: ಚೆನ್ನೈನಲ್ಲಿ ಯೋಗಶಾಂತಿ ಗುರುಕುಲದ ಸ್ಥಾಪಕರಾದ ಬ್ರಹ್ಮ ಯೋಗಾನಂದ ಸ್ವಾಮೀಜಿ ಸೋಮವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಿತ್ಯವೂ ಧರ್ಮದ ಅನುಷ್ಠಾನವೇ ನಮ್ಮ ಕರ್ತವ್ಯವಾಗಿದ್ದು, ಪ್ರಚಾರಕ್ಕಿಂತ ಆಚಾರ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು. ಸುಭದ್ರ ಭಾರತ ನಿರ್ಮಾಣಕ್ಕಾಗಿ ಶ್ರೀ ರಾಮ ಮತ್ತು ಲಕ್ಷ್ಮೀ ಮೂರ್ತಿಯೊಂದಿಗೆ ಸ್ವಾಮೀಜಿ ಈಗಾಗಲೇ ದೇಶದಲ್ಲೆಡೆ ಸಾವಿರಕ್ಕೂ ಅಧಿಕ ತೀರ್ಥಕ್ಷೇತ್ರಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ.
ಶೃಂಗೇರಿ, ಮಂಗಳೂರು, ಕನ್ಯಾಕುಮಾರಿ ಮೂಲಕ ತಮ್ಮ ಕಾಂಚೀಪುರಂ ಆಶ್ರಮಕ್ಕೆ ಹೋಗುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸ್ವಾಮೀಜಿಯವರನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಗೌರವಿಸಿದರು.