ETV Bharat / state

ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ: ನಳಿನ್ ಕುಮಾರ್ ಕಟೀಲ್​ ಸಂತಸ

author img

By

Published : Dec 30, 2021, 3:21 PM IST

ಕಳೆದ ಬಾರಿಗಿಂತ ಕರಾವಳಿ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಒಟ್ಟಾರೆ ರಾಜ್ಯದ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ದೊರಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

BJP wins again in mangalure districts: Nalin Kumar
ನಳಿನ್ ಕುಮಾರ್ ಕಟೀಲು

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ನಮ್ಮ ಪಕ್ಷ ಪಡೆದಿದೆ. ಒಟ್ಟಾರೆ ರಾಜ್ಯದ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ದೊರಕಿದೆ ಎಂದು ನಗರದಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ವಿಚಾರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಸ್ಥಳೀಯವಾದ ಕಾರಣ ಅಭ್ಯರ್ಥಿಗಳು, ವಿಷಯಗಳು ಸ್ಥಳೀಯವಾಗಿರುತ್ತವೆ. ಆದ್ದರಿಂದ ಇದು ಸ್ಥಳೀಯವಾಗಿ ಸಂಬಂಧಿಸಿದ ಚುನಾವಣೆ. ಆದರೆ, ಪಕ್ಷೇತರ ಅಭ್ಯರ್ಥಿಯೊಬ್ಬ ಚುನಾವಣಾ ಕಣದಲ್ಲಿದ್ದರೂ ಮತಗಳಲ್ಲಿ ವ್ಯತ್ಯಾಸವಾಗುತ್ತದೆ‌. ಫಲಿತಾಂಶ ವಿರುದ್ಧ ಬರುತ್ತದೆ‌. ಆದರೂ ಬಿಜೆಪಿಗೆ ಉತ್ತಮವಾದ ಫಲಿತಾಂಶ ದೊರಕಿದೆ ಎಂದು ಸಂತಸಪಟ್ಟರು.

ನಳಿನ್ ಕುಮಾರ್ ಕಟೀಲ್​ ಪ್ರತಿಕ್ರಿಯೆ

ಸಂಜೆ ಹೊತ್ತಿಗಿನ ಪೂರ್ಣ ಫಲಿತಾಂಶದ ಬಳಿಕ ಬಿಜೆಪಿ ಉತ್ತಮವಾಗಿ ಗೆದ್ದು ಬರಲಿದೆ. ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಹಲವೆಡೆ ಬಿಜೆಪಿ ಈ ಬಾರಿ ಗೆಲುವು ಸಾಧಿಸಿದೆ.‌ ಈ ಫಲಿತಾಂಶ ಖಂಡಿತವಾಗಿಯೂ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಲ್ಲ. ಗ್ರಾ.ಪಂ, ಪ.ಪಂಗಳು ಯಾವುದೇ ಚುನಾವಣೆಯ ದಿಕ್ಸೂಚಿಯಾಗಲು ಸಾಧ್ಯವಿಲ್ಲ. ಆದರೂ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬಂದಿದೆ ಎಂದೆನಿಸುತ್ತಿದೆ ಎಂದು ಕಟೀಲ್ ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.