ETV Bharat / state

ಕಾಂಗ್ರೆಸ್ ರಾಷ್ಟ್ರವಿರೋಧಿ ಪಕ್ಷ:  ನಳೀನ್ ಕುಮಾರ್ ಕಟೀಲ್ ಗಂಭೀರ ಆರೋಪ - ಮುಖ್ಯಮಂತ್ರಿ ಯಡಿಯೂರಪ್ಪ

ದ.ಕ.ಜಿಲ್ಲೆಯಲ್ಲಿ ನಡೆದ ಗಲಭೆಗಳಲ್ಲಿ ಯಾರ ಕೈವಾಡ ಇದೆಯೋ ಇಲ್ಲವೋ ಗೊತ್ತಿಲ್ಲ‌. ಆದರೆ ಕಾಂಗ್ರೆಸ್ ನೇರವಾಗಿ ಭಾಗಿಯಾಗಿದೆ. ಗಲಭೆಗೆ ಕೇರಳದಿಂದ ಬಂದವರು‌ ಕಾಂಗ್ರೆಸ್​ನ ಕಾರ್ಯಕರ್ತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

bjp-president-nalin-kumar-kateel-speech-at-mangalore

author img

By

Published : Feb 24, 2020, 10:48 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆದ ಗಲಭೆಗಳಲ್ಲಿ ಯಾರ ಕೈವಾಡ ಇದೆಯೋ ಇಲ್ಲವೋ ಗೊತ್ತಿಲ್ಲ‌. ಆದರೆ, ಕಾಂಗ್ರೆಸ್ ನೇರವಾಗಿ ಭಾಗಿಯಾಗಿದೆ. ಗಲಭೆಗೆ ಕೇರಳದಿಂದ ಬಂದವರು‌ ಕಾಂಗ್ರೆಸ್​ನ ಕಾರ್ಯಕರ್ತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣದಲ್ಲಿ ಮಾತನಾಡಿದ ಅವರು, ಕೆಎಲ್​ಯು ಸೊಸೈಟಿ ಒಳಗಡೆ ಪಾಕಿಸ್ತಾನದ ಪರವಾಗಿ ಜೈಕಾರ ಕೂಗಿದವರ ಪರವಾಗಿ ಕಾಂಗ್ರೆಸ್ ನಿಂತಿದೆ. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿದ್ಯಾರ್ಥಿನಿ ಕಾಂಗ್ರೆಸ್ ವೇದಿಕೆಯಲ್ಲಿ ಈ ಹಿಂದೆ ಮಾತನಾಡಿದ್ದಾಳೆ. ಇದರ ಹಿಂದಿರೋದು ಕಮ್ಯುನಿಸ್ಟರು ಮಾತ್ರವಲ್ಲ ಕಾಂಗ್ರೆಸ್ಸಿಗರು ಇದ್ದಾರೆ. ಹಾಗಾಗಿ ಕಾಂಗ್ರೆಸ್ ರಾಷ್ಟ್ರ ವಿರೋಧಿ ಎಂದು‌ ಹೇಳಿದರು.

ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ

ದ.ಕ.ಜಿಲ್ಲೆಯಲ್ಲಿ ಸಾಮರಸ್ಯದ ಸಂಕೇತ, ಅಜಾತಶತ್ರು ಎಂದು ಹೇಳಿ, ನಾಮ ಹಾಕಿ ನಾಗಮಂಡಲಕ್ಕೆ ಹೋಗಿ, ಶಾಲು ಹಾಕಿ ಬ್ರಹ್ಮಕಲಶದಲ್ಲಿ ಕುಳಿತು, ಹಿಂದೂಗಳ ಪರವಾಗಿದ್ದೇನೆ ಎಂದು ಹೇಳಿದ ವ್ಯಕ್ತಿ ಸಿಎಎಯ ವಿರುದ್ಧ ಹೋರಾಟ ಮಾಡುತ್ತೇನೆ. ಮಂಗಳೂರಿಗೆ ಬೆಂಕಿ‌ ಹಾಕುತ್ತೇನೆ ಎಂದು ಹೇಳಿ ಮರುದಿನ ಬೆಂಕಿ ಹಾಕೋ ಪ್ರಯತ್ನ ಮಾಡಿದ್ರಲ್ಲ, ಇವರನ್ನು ಓಡಿಸಬೇಕೋ ಬೇಡವಾ, ವಿಧಾನಸಭೆಯಲ್ಲಿ ಕುಳಿತು ನರೇಂದ್ರ ಮೋದಿಯವರಿಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯನ್ನು ಓಡಿಸಬೇಕೋ ಬೇಡವಾ ಎಂದು ಯು.ಟಿ.ಖಾದರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಇಂದು ಪರಿವರ್ತನೆಯ ಗಾಳಿ ಬೀಸುತ್ತಿದೆ. ಕಾಶ್ಮೀರ, ಹುಬ್ಬಳ್ಳಿಯಲ್ಲಿ ಭಾರತದ ಬಾವುಟ ಹಾರಿಸಲು ವಿರೋಧ ಮಾಡುತ್ತಿದ್ದ ಮನಸ್ಸುಗಳು ರಾಷ್ಟ್ರಧ್ವಜವನ್ನು ಹಿಡಿದು 'ಭಾರತ್ ಮಾತಾ ಕೀ ಜೈ' ಎನ್ನುವ ಕಾಲಘಟ್ಟದಲ್ಲಿ ನಾವಿಂದು ಇದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ಮಾಡುತ್ತಾ ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗುತ್ತಿದೆ. ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದು ಗಾಂಧಿ ಕನಸು ಕಂಡರು. ಆ ಕನಸನ್ನು ಕಾಂಗ್ರೆಸ್ ನನಸು ಮಾಡಲಿಲ್ಲ. ಇಂದಿರಾ ಗಾಂಧಿಯವರು ಬಾಂಗ್ಲಾ, ಪಾಕಿಸ್ತಾನದಿಂದ ಬಂದವರಿಗೆ ಪೌರತ್ವ ನೀಡಬೇಕೆಂದು ಹೇಳಿದ್ದರು. ಅಯೋಧ್ಯೆ ನಮ್ಮದು ಎಂದು ನೂರಾರು ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಇಂದು ಬಿಜೆಪಿ ಸರಕಾರ 67 ಎಕರೆ ಜಾಗದಲ್ಲಿ ಮೂರು ವರ್ಷಗಳ ಒಳಗೆ ರಾಮ ಮಂದಿರ ನಿರ್ಮಾಣ ಮಾಡಲಿದೆ. ಕಾಶ್ಮೀರ ಉಳಿಸಿ ಎಂದು ಸಂಘದ ಕಾರ್ಯಕರ್ತರು ಹೇಳುತ್ತಿದ್ದರು. ಇಂದು ಮೋದಿ ಸರಕಾರ 370ನೇ ವಿಧಿ ರದ್ದತಿ ಮೂಲಕ ಕಾಶ್ಮೀರಿ ಪಂಡಿತರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ ಎಂದು ಹೇಳಿದರು.

ಇಂದು ರಾಜ್ಯದ ಜನರ ಕಣ್ಣೀರನ್ನು ಒರೆಸುವ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇದ್ದಾರೆ. ಈ ಹಿಂದೆ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದವರು ಮನೆಮನೆಗಳಿಗೆ ಹೋಗಿ ಕಣ್ಣೀರು ಸುರಿಸಿದರು. ಸಭೆಯಲ್ಲಿ ಹೋಗಿ ಕಣ್ಣೀರು ಸುರಿಸಿದರು. ಇನ್ನೊಬ್ಬರು ಐದು ವರ್ಷಗಳ ಕಾಲ ರಾಜ್ಯವನ್ನು ಆಳಿ ಜನಸಾಮಾನ್ಯರ ಕಣ್ಣಿನಲ್ಲಿ‌ ಕಣ್ಣೀರು ತರಿಸುವ ಮುಖ್ಯಮಂತ್ರಿಯಾದರು. ಅವರಿಗೆ ಈ ರಾಜ್ಯದ 24 ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕಣ್ಣೀರು ಬಂದಿಲ್ಲ. ದ.ಕ.ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರು ಬಂದ ಬಳಿಕ ಯಾವುದೇ ಗಲಭೆಗಳು ನಡೆದಿಲ್ಲ. ಒಂದೇ ಒಂದು ಹತ್ಯೆಗಳು ನಡೆದಿಲ್ಲ. ಹಿಂದಿನ ಎರಡೂ ಸರಕಾರ ಇರುವಾಗ ಜನರಿಗೆ ರಕ್ಷಣೆ ಇರಲಿಲ್ಲ. ಹಾಗಾಗಿ ಮನೆಮನೆಗಳಲ್ಲಿ ಕಣ್ಣೀರು ಬರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಣ್ಣೀರು ಸುರಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕಣ್ಣೀರು ಒರೆಸುವ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ನಳಿನ್ ಕುಮಾರ್ ಪರೋಕ್ಷವಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.