ETV Bharat / state

ತನ್ನ ಟ್ರ್ಯಾಕ್ಟರ್​ನಡಿಯೇ ಸಿಲುಕಿ ಪ್ರಾಣ ಬಿಟ್ಟ ಚಾಲಕ... ಕುಡ್ಲದಲ್ಲೊಂದು ಮನ ಕಲಕುವ ಘಟನೆ - ಬೈಕ್ ಸವಾರ ಅದೇ ಟ್ರ್ಯಾಕ್ಟರ್ ಚಾಲಕ

ದುರಂತವೆಂದರೆ ಮೃತ ಬೈಕ್ ಸವಾರ ಅದೇ ಟ್ರ್ಯಾಕ್ಟರ್ ಚಾಲಕನಾಗಿದ್ದು ಸೋಮವಾರ ರಜೆ ತೆಗೆದುಕೊಂಡ ಕಾರಣ ಬದಲಿ ಚಾಲಕನನ್ನು ಕರೆಸಿಕೊಂಡಿದ್ದರು.

ಬೈಕ್ ಸವಾರ ಸಾವು
ಬೈಕ್ ಸವಾರ ಸಾವು
author img

By

Published : Jun 22, 2020, 6:40 PM IST

ಮಂಗಳೂರು: ಟ್ರ್ಯಾಕ್ಟರ್​ನಡಿಗೆ ಸಿಲುಕಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿರುವ ಘಟನೆ, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಹಾಕುವಕಲ್ಲು ಪುಣ್ಯಕೋಟಿ ನಗರದ ಬಳಿ ನಡೆದಿದೆ.

ಮೃತನ ಹೆಸರು ತಿಳಿದು ಬಂದಿಲ್ಲ, ದುರಂತವೆಂದರೆ ಮೃತ ಬೈಕ್ ಸವಾರ ಅದೇ ಟ್ರ್ಯಾಕ್ಟರ್ ಚಾಲಕನಾಗಿದ್ದು ಸೋಮವಾರ ರಜೆ ತೆಗೆದುಕೊಂಡ ಕಾರಣ ಬದಲಿ ಚಾಲಕನನ್ನು ಕರೆಸಿಕೊಂಡಿದ್ದರು.

ಪುಣ್ಯಕೋಟಿ ನಗರದ ಬಳಿಯ ಮನೆಯೊಂದರ ರಸ್ತೆ ಅಗೆಯುವ ಕೆಲಸ ನಿರ್ವಹಿಸಿದ ಬದಲಿ ಚಾಲಕ, ಒಳರಸ್ತೆಯಿಂದ ಮುಡಿಪು ಮಂಜನಾಡಿ ಸಂಪರ್ಕ ರಸ್ತೆಗೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವೇಳೆ, ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್​ಗೆ ತಾಗಿ ಅಪಘಾತದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇನ್ನು ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಬೈಕ್ ಸವಾರನ‌ ತಲೆಯ ಮೇಲೆ ಏರಿದೆ.

ಕೊಣಾಜೆ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.