ETV Bharat / state

ಯುಟಿ ಖಾದರ್ ಕಾರು ಬೆಂಬತ್ತಿ ಬಂದ ಬೈಕ್ ಸವಾರ ಪರಾರಿ, ಪೊಲೀಸರಿಂದ ಶೋಧ ಕಾರ್ಯ

ಬೆಂಗಳೂರಿಗೆ ತೆರಳಲು ಮಂಗಳೂರಿನ ದೇರಳಕಟ್ಟೆಯಿಂದ ವಿಮಾನ ನಿಲ್ದಾಣಕ್ಕೆ ಯುಟಿ ಖಾದರ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಯುಟಿ ಖಾದರ್ ಅವರ ಕಾರನ್ನು ದೇರಳಕಟ್ಟೆಯಿಂದ ಬೈಕ್ ನಲ್ಲಿ ಒಬ್ಬ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಎಸ್ಕಾರ್ಟ್ ನೀಡುತ್ತಿದ್ದ ಪೊಲೀಸರು ಗಮನಿಸಿದ್ದಾರೆ.

Bike rider escaped from UT Khadar car enthusiast
ಯುಟಿ ಖಾದರ್ ಕಾರು ಬೆಂಬತ್ತಿ ಬಂದ ಬೈಕ್ ಸವಾರ
author img

By

Published : Dec 23, 2020, 9:28 PM IST

ಮಂಗಳೂರು: ಮಾಜಿ ಸಚಿವ ಯುಟಿ ಖಾದರ್ ಅವರ ಕಾರನ್ನು ಬೆಂಬತ್ತಿ ಬಂದ ಬೈಕ್ ಸವಾರನನ್ನು ಪೊಲೀಸರು ಹಿಡಿಯುವ ವೇಳೆ ಪರಾರಿಯಾದ ಘಟನೆ ನಡೆದಿದೆ.

ಬೆಂಗಳೂರಿಗೆ ತೆರಳಲು ಮಂಗಳೂರಿನ ದೇರಳಕಟ್ಟೆಯಿಂದ ವಿಮಾನ ನಿಲ್ದಾಣಕ್ಕೆ ಯುಟಿ ಖಾದರ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಯುಟಿ ಖಾದರ್ ಅವರ ಕಾರನ್ನು ದೇರಳಕಟ್ಟೆಯಿಂದ ಬೈಕ್ ನಲ್ಲಿ ಓರ್ವ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಎಸ್ಕಾರ್ಟ್ ನೀಡುತ್ತಿದ್ದ ಪೊಲೀಸರು ಗಮನಿಸಿದ್ದಾರೆ. ಅವರು ಕೂಡಲೇ ಹಿರಿಯ ಪೊಲೀಸರಿಗೆ ಪೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಓದಿ: ರಾಜ್ಯದಲ್ಲಿಂದು 958 ಕೊರೊನಾ ಕೇಸ್​ ಪತ್ತೆ: 9 ಮಂದಿ ಬಲಿ

ನಂತೂರು ಸರ್ಕಲ್ ಸಮೀಪ ವಾಹನ ದಟ್ಟಣೆಯಿಂದ ವಾಹನ ನಿಧಾನವಾಗಿ ಸಂಚರಿಸುತ್ತಿದ್ದು, ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿ ವಿರುದ್ಧ ದಿಕ್ಕಿನಲ್ಲಿ ತೆರಳಿ ಪರಾರಿಯಾಗಿದ್ದಾರೆ. ಅನುಮಾನಸ್ಪದವಾಗಿ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.