ETV Bharat / state

ಬೈಕ್​​​​ ಡಿಕ್ಕಿ ಹೊಡೆದು ಸೆಕ್ಯುರಿಟಿ ಗಾರ್ಡ್​ ಸಾವು - ಬೈಕ್​ ಅಪಘಾತ ಲೆಟೆಸ್ಟ್ ನ್ಯೂಸ್

ಬೈಕ್​ ಡಿಕ್ಕಿ ಹೊಡೆದು ರಸ್ತೆ ದಾಡುತ್ತಿದ್ದ ವೇಳೆ ಸೆಕ್ಯುರಿಟಿ ಗಾರ್ಡ್​ ಮೃತಪಟ್ಟಿರುವ ಘಟನೆ ಮುಕ್ರಂಪಾಡಿ ಕಮ್ಮಾಡಿ ಪ್ಲೇವುಡ್ ಫ್ಯಾಕ್ಟರಿ ಬಳಿ ನಡೆದಿದೆ.

ಬೈಕ್​ ಅಪಘಾತ
Bike accident
author img

By

Published : Dec 7, 2019, 3:12 PM IST

ಪುತ್ತೂರು: ಬೈಕ್​ ಡಿಕ್ಕಿ ಹೊಡೆದು ರಸ್ತೆ ದಾಡುತ್ತಿದ್ದ ವೇಳೆ ಸೆಕ್ಯುರಿಟಿ ಗಾರ್ಡ್​ ಮೃತಪಟ್ಟಿರುವ ಘಟನೆ ಮುಕ್ರಂಪಾಡಿ ಕಮ್ಮಾಡಿ ಪ್ಲೇವುಡ್ ಫ್ಯಾಕ್ಟರಿ ಬಳಿ ನಡೆದಿದೆ.

ಬೈಕ್​ ಡಿಕ್ಕಿ ಹೊಡೆದು ಸೆಕ್ಯುರಿಟಿ ಸಾವು

ಲಾರೆನ್ಸ್ ಡಿಸೋಜ(70) ಮೃತ ವ್ಯಕ್ತಿ. ಇವರು ನಗರದ ಮಾಯಿದೆ ದೇವುಸ್ ಚರ್ಚ್​ನಲ್ಲಿ ಹದಿನೈದು ವರ್ಷಗಳಿಂದ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದರು. ಇವರು ನಿನ್ನೆ ತಮ್ಮ ಕೆಲಸ ಮುಗಿಸಿಕೊಂಡು ಮನೆ ಕಡೆ ತೆರಳುತ್ತಿದ್ದ ವೇಳೆ ರಸ್ತೆ ದಾಟುವಾಗ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಬೈಕ್​ ಸವಾರ ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಬೈಕ್​ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಬೈಕ್​ ಡಿಕ್ಕಿ ಹೊಡೆದು ರಸ್ತೆ ದಾಡುತ್ತಿದ್ದ ವೇಳೆ ಸೆಕ್ಯುರಿಟಿ ಗಾರ್ಡ್​ ಮೃತಪಟ್ಟಿರುವ ಘಟನೆ ಮುಕ್ರಂಪಾಡಿ ಕಮ್ಮಾಡಿ ಪ್ಲೇವುಡ್ ಫ್ಯಾಕ್ಟರಿ ಬಳಿ ನಡೆದಿದೆ.

ಬೈಕ್​ ಡಿಕ್ಕಿ ಹೊಡೆದು ಸೆಕ್ಯುರಿಟಿ ಸಾವು

ಲಾರೆನ್ಸ್ ಡಿಸೋಜ(70) ಮೃತ ವ್ಯಕ್ತಿ. ಇವರು ನಗರದ ಮಾಯಿದೆ ದೇವುಸ್ ಚರ್ಚ್​ನಲ್ಲಿ ಹದಿನೈದು ವರ್ಷಗಳಿಂದ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದರು. ಇವರು ನಿನ್ನೆ ತಮ್ಮ ಕೆಲಸ ಮುಗಿಸಿಕೊಂಡು ಮನೆ ಕಡೆ ತೆರಳುತ್ತಿದ್ದ ವೇಳೆ ರಸ್ತೆ ದಾಟುವಾಗ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಬೈಕ್​ ಸವಾರ ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಬೈಕ್​ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಸೆಕ್ಯೂರಿಟಿ ಲಾರೆನ್ಸ್ ಡಿ' ಸೋಜ ಬೈಕ್ ಅಪಘಾತದಲ್ಲಿ ಮೃತ್ಯು

ಪುತ್ತೂರು: ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ನಲ್ಲಿ ಕಳೆದ ಸುಮಾರು ಹದಿನೈದು ವರ್ಷಗಳಿಂದ ಮಾಯಿದೆ ದೇವುಸ್ ಚರ್ಚ್ ನಲ್ಲಿ ಸೆಕ್ಯೂರಿಟಿ ವೃತ್ತಿ ಮಾಡುತ್ತಿದ್ದ ಲಾರೆನ್ಸ್ ಡಿ'ಸೋಜ(70ವ.) ರವರು ಡಿ.6 ರಂದು ರಾತ್ರಿ ಮುಕ್ರಂಪಾಡಿ ಕಮ್ಮಾಡಿ ಫ್ಲ್ಯೆವುಡ್ ಫ್ಯಾಕ್ಟರಿ ಬಳಿ ರಸ್ತೆ ದಾಟಲೆತ್ನಿಸಿದ ವೇಳೆ ಸುಜುಕಿ ಡಿಕ್ಸರ್(ka 21 x 2812)ಬೈಕೊಂದು ಢಿಕ್ಕಿಯಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಅಪಘಾತವಾದ ತಕ್ಷಣ ಸ್ಥಳೀಯರೋರ್ವರು ಜೈಭಾರತ್ ಆಂಬುಲೆನ್ಸ್ ನ ಸಿರಾಜ್ ರವರಿಗೆ ಘಟನೆ ಬಗ್ಗೆ ತಿಳಿಸಿದಾಗ ಕೂಡಲೇ ಸಿರಾಜ್ ರವರು ಆಂಬುಲೆನ್ಸ್ ನೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳು ಪಾದಚಾರಿ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳು ಆ ಸಮಯದಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತ ಲಾರೆನ್ಸ್ ರವರ ಎಡ ಕಾಲು ತುಂಡಾಗಿದ್ದು, ಎದೆಯ ಭಾಗಕ್ಕೆ ಮತ್ತು ತಲೆಗೆ ಗಂಭೀರ ಗಾಯಗಳಾಗಿತ್ತು ಎನ್ನಲಾಗಿದೆ.
ಮೃತ ಲಾರೆನ್ಸ್ ರವರು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಕಳೆದ ಮೂರು ದಿನಗಳಿಂದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೆಕ್ಯೂರಿಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರ್ಷಿಕೋತ್ಸವದ ಕೊನೆ ದಿನವಾದ ಡಿಸೆಂಬರ್ 6ರಂದು ಲಾರೆನ್ಸ್ ರವರು ಮಾಯಿದೆ ದೇವುಸ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಸೆಕ್ಯೂರಿಟಿ ಸೇವೆಯನ್ನು ನಿರ್ವಹಿಸುತ್ತಿದ್ದರು. ವಾರ್ಷಿಕೋತ್ಸವ ಮುಗಿದ ಬಳಿಕ ರಾತ್ರಿ ಹತ್ತು ಗಂಟೆ ಹೊತ್ತಿಗೆ ಲಾರೆನ್ಸ್ ರವರು ಮುಕ್ರಂಪಾಡಿ ಆನಂದಾಶ್ರಮ ತಮ್ಮ ಮನೆ ಕಡೆಗೆ ರಿಕ್ಷಾದಲ್ಲಿ ಹೋಗುತ್ತಿದ್ದ ಸಂದರ್ಭ ಮುಕ್ರಂಪಾಡಿ ಕಮ್ಮಾಡಿ ಬಳಿ ರಿಕ್ಷಾದಿಂದ ಇಳಿದು ರಸ್ತೆ ದಾಟಲೆತ್ನಿಸುವಾಗ ಪುತ್ತೂರಿನಿಂದ ಶೇಖಮಲೆಗೆ ವಿವೇಕಾನಂದ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮಿಥುನ್ ರವರು ಚಲಾಯಿಸುತ್ತಿದ್ದ ಸುಜುಕಿ ಡಿಕ್ಸರ್ ಬಲವಾಗಿ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದೆ. ಢಿಕ್ಕಿ ಹೊಡೆದ ಸುಜುಕಿ ಡಿಕ್ಸರ್ ಸವಾರ ಮಿಥುನ್ ರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತ ಲಾರೆನ್ಸ್ ರವರು ಕಳೆದ ಸುಮಾರು ಹತ್ತು ವರ್ಷಗಳಿಂದ ಮಾಯಿದೆ ದೇವುಸ್ ಚರ್ಚ್ ನಲ್ಲಿ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿ, ಫಾ. ಪತ್ರಾವೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಶರೀರವನ್ನು ಇರಿಸಲಾಗಿದೆ. ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ.ಆಲ್ಫ್ರೆಡ್ ಜಾನ್ ಪಿಂಟೋ, ಸಹಾಯಕ ಧರ್ಮಗುರು ವಂ.ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಮುಕ್ರಂಪಾಡಿ-ಸಿಂಹವನ ನಿವಾಸಿ ಚಂದ್ರ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಯಕ್ಷ ಅರುಣ್ ರೆಬೆಲ್ಲೋ, ಮಾಜಿ ಅಧ್ಯಕ್ಷ ರೋಶನ್ ಡಾಯಸ್, ಮಾಜಿ ನಗರಸಭಾ ಸದಸ್ಯ ಲ್ಯಾನ್ಸಿi ಮಸ್ಕರೇನ್ಹಸ್, ಮಾಯಿದೆ ದೇವುಸ್ ಚರ್ಚ್ ನ ನಿತ್ಯಾಧರ್ ವಾಳೆಯ ಗುರಿಕಾರ ರಿಚರ್ಡ್ ರೆಬೆಲ್ಲೋ, ರೋಟರಿಪುರ ವಾಳೆಯ ಗುರಿಕಾರ ವರ್ಗೀಸ್, ಸುಪ್ರೀಂ ಸರ್ವೀಸಸ್ ನ ಸಿಪ್ರಿಯಸ್ ಮೊರಾಸ್, ಪ್ರಕಾಶ್ ಸಿಕ್ವೇರಾ ಸಹಿತ ಹಲವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೃತರು ಪತ್ನಿ ಬೆನ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.