ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್‌ನ ಪ್ರಥಮ ಕಾರ್ಯಕ್ರಮವಾಗಿ ಫೆ.8ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಭಜನಾ ಸತ್ಸಂಗ ಸಮಾವೇಶ ನಡೆಯಲಿದೆ.
20ನೇ ವರ್ಷದ ಶುಭಘಳಿಗೆಯಲ್ಲಿ ಭಜನಾ ಪರಿಷತ್ ಸಂಸ್ಥೆಯು ಧರ್ಮಸ್ಥಳದಲ್ಲಿ ಆರಂಭಗೊಂಡಿದೆ. ಭಜನಾ ಭಕ್ತಿ ಮಾರ್ಗವನ್ನು ಸಮಾಜದಲ್ಲಿ ಸಂಚಲನಗೊಳಿಸಲು 20 ವರ್ಷಗಳಿಂದ ಕ್ಷೇತ್ರದ ವತಿಯಿಂದ ಭಜನಾ ಕಮ್ಮಟಗಳು, ಭಜನಾ ಶಿಬಿರಗಳು ನಡೆಯುತ್ತಿವೆ. ಈ ಬಾರಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎರಡು ಸಾವಿರ ಭಜನಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಪಾಲಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾಹಿತಿ ನೀಡಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.