ETV Bharat / state

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆಯಲ್ಲಿ ಬೆಳ್ತಂಗಡಿ ಶಿಲ್ಪಿ ಜಯಚಂದ್ರ ಆಚಾರ್ಯ

ಬೆಳ್ತಂಗಡಿ ತಾಲೂಕಿನ ಶಿಲ್ಪಿ ಜಯಚಂದ್ರ ಆಚಾರ್ಯ ಅವರು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿರುವ ಮೂರ್ತಿ ಕೆತ್ತನಾ ತಂಡದಲ್ಲಿ ಇದ್ದರು.

ಶಿಲ್ಪಿ ಜಯಚಂದ್ರ ಆಚಾರ್ಯ
ಶಿಲ್ಪಿ ಜಯಚಂದ್ರ ಆಚಾರ್ಯ
author img

By ETV Bharat Karnataka Team

Published : Jan 5, 2024, 1:41 PM IST

Updated : Jan 5, 2024, 4:04 PM IST

ಶಿಲ್ಪಿ ಜಯಚಂದ್ರ ಆಚಾರ್ಯ

ಬೆಳ್ತಂಗಡಿ (ದಕ್ಷಿಣ ಕನ್ನಡ): ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳದಲ್ಲಿರುವ ಶಿಲ್ಪಿ ಜಯಚಂದ್ರ ಆಚಾರ್ಯ ಅವರು ಕೂಡ ಮೂರ್ತಿ ಕೆತ್ತನಾ ತಂಡದಲ್ಲಿ ಇದ್ದರು.

ಬಾಲರಾಮನ ವಿಗ್ರಹ ಕೆತ್ತನೆಗೆಂದು ದೆಹಲಿಯಲ್ಲಿ ಕಳೆದ 7 ತಿಂಗಳ ಹಿಂದೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ನೂರಕ್ಕೂ ಹೆಚ್ಚು ಕಲಾವಿದರ ತಂಡಗಳೊಂದಿಗೆ ಸಭೆ ನಡೆಸಿತ್ತು. ಆ ಪೈಕಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ, ಮೈಸೂರಿನ ಅರುಣ್ ಯೋಗಿರಾಜ್, ಸಾಗರದ ವಿಪಿನ್ ಬದೋರಿಯಾ ಹಾಗೂ ಜಿ.ಎಲ್.ಭಟ್ ಇಡಗುಂಜಿ ಸೇರಿ ಮೂರು ತಂಡ ಆಯ್ಕೆಯಾಗಿತ್ತು.

ಸಾಗರದ ವಿಪಿನ್ ಬದೋರಿಯಾ ಅವರ ತಂಡದಲ್ಲಿ ಹಾನಗಲ್‌ನ ಮೌನೇಶ್ ಬಡಿಗೇರ್, ಕಲ್ಗಟಿಗೆ ಪ್ರಕಾಶ್ ಹರಮನ್ ನವರ್, ಇಡಗುಂಜಿ ಸಂದೀಪ್ ಸೇರಿದಂತೆ ಬೆಳ್ತಂಗಡಿ ತಾಲೂಕಿನ ನಾಳದ ಜಯಚಂದ್ರ ಆಚಾರ್ಯ ವಿಗ್ರಹ ನಿರ್ಮಾಣ ತಂಡದಲ್ಲಿ ಆಯ್ಕೆಯಾಗಿದ್ದರು.

8 ಅಡಿಯುಳ್ಳ ಬಾಲರಾಮ: ಬಾಲರಾಮನ ವಿಗ್ರಹ ಕೆತ್ತನೆಗೆಂದು ರಾಜ್ಯದ ಕಾರ್ಕಳದ ಈದುವಿನ ಕೃಷ್ಣಶಿಲೆ, ರಾಜಸ್ಥಾನದ ಅಮೃತಶಿಲೆ, ಮೈಸೂರಿನ ಹೆಚ್.ಡಿ.ಕೋಟೆಯ ಕೃಷ್ಣ ಶಿಲೆ, ಗಂಡಕಿ ನದಿಯ ಸಾಲಿಗ್ರಾಮದ ಶಿಲೆ ಆಯ್ಕೆ ಮಾಡಿ ಅಯೋಧ್ಯೆಗೆ ಕಳುಹಿಸಲಾಗಿತ್ತು. ಆ ಪೈಕಿ ಮೈಸೂರಿನ ಮತ್ತು ರಾಜಸ್ಥಾನದ ಶಿಲೆಗಳೆರಡು ರಾಮಲಲ್ಲನ ಮೂರ್ತಿ ನಿರ್ಮಾಣಕ್ಕೆ ಶ್ರೇಷ್ಠವಾಗಿತ್ತು. ಐದು ವರ್ಷದ ಮಗುವಿನ ರೂಪವುಳ್ಳ ನಿಂತಿರುವ ಬಾಲರಾಮನ 8 ಅಡಿ ಎತ್ತರದ ವಿಗ್ರಹ ನಿರ್ಮಾಣಕ್ಕೆ ಮೂರು ತಂಡಗಳಿಗೆ ಟ್ರಸ್ಟ್ ಸೂಚಿಸಿತ್ತು.

ಗೌಪ್ಯತೆ ಮತ್ತು ಸಕಲ ಬಂದೋಬಸ್ತ್​: ಅಯೋಧ್ಯೆಯಿಂದ 3 ಕಿ.ಮೀ. ದೂರದಲ್ಲಿ ಮೂರು ತಂಡವನ್ನು ಪ್ರತ್ಯೇಕಿಸಿ ಸಕಲ ಬಂದೋಬಸ್ತ್‌ನೊಂದಿಗೆ ಗೌಪ್ಯ ಸ್ಥಳದಲ್ಲಿ ವಿಗ್ರಹ ಕೆತ್ತನೆ ಪೂರ್ಣಗೊಂಡಿದೆ. ಈ ಪೈಕಿ ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್ ಅವರ ತಂಡ ರಚಿಸಿದ ಕೃಷ್ಣಶಿಲೆ ರೂಪಿತ ಬಾಲರಾಮನ ವಿಗ್ರಹವು ಜನವರಿ 22 ರಂದು ಮೂಲ ವಿಗ್ರಹವಾಗಿ ಪ್ರಾಣಪ್ರತಿಷ್ಠೆಗೆ ಆಯ್ಕೆಯಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಜಯಚಂದ್ರ ಆಚಾರ್ಯ ಅವರು ಹಾಗೂ ರಾಜಸ್ಥಾನದ ತಂಡ ರಚಿಸಿರುವ ಅಮೃತ ಶಿಲೆ ಹಾಗೂ ಕೃಷ್ಣಶಿಲೆ ವಿಗ್ರಹಗಳು ಟ್ರಸ್ಟ್​ ಸೂಚನೆಯಂತೆ ಉನ್ನತ ಸ್ಥಾನಮಾನದೊಂದಿಗೆ ಅಯೋಧ್ಯೆ ಮಂದಿರದೊಳಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ. ವಿಗ್ರಹ ರಚನೆಗೆ ಸಮ್ಮತಿ ಸಿಗದ ಶಿಲೆಗಳನ್ನು ಗಣಪತಿ ಮಂದಿರದ ಬಳಿ ಇರಿಸಲಾಗಿದೆಯಂತೆ. ಅವುಗಳು ಮುಂದೆ ಬೇರೆ ವಿಗ್ರಹ ಅಥವಾ ಬೇರೆ ರೂಪದಲ್ಲಿ ಸ್ಥಾನ ಪಡೆಯುವ ಅವಕಾಶಕ್ಕಾಗಿ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.

ನಾಳದ ಪ್ರತಿಭೆ ಜಯಚಂದ್ರ ಆಚಾರ್ಯ: ನಾಳದ ಗ್ರಾಮೀಣ ಯುವ ಪ್ರತಿಭೆಯಾಗಿರುವ ಜಯಚಂದ್ರ ಆಚಾರ್ಯ (33) ಅವರು ತಮ್ಮ ಕಲಾ ನೈಪುಣ್ಯತೆಯಿಂದ ಈಗಾಗಲೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ವಿಶ್ವಕರ್ಮ ಶಿಲ್ಪರತ್ನ, ರಾಜ್ಯ ಯುವಜನ ಪರಿಷತ್​​ನಿಂದ ವಿಶ್ವಕರ್ಮ ಅನರ್ಘ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು. ಪಿಯುಸಿ ಬಳಿಕ ಶಿಲ್ಪಕಲೆ ಅಧ್ಯಯನ ಮಾಡಿರುವ ಇವರು ತಮಿಳುನಾಡು ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಮರದ ಚಂದ್ರಮಂಡಲ ರಥ, ಉಡುಪಿಯ ಗಣಪತಿ ದೇವಸ್ಥಾನಕ್ಕೆ ಪುಷ್ಪರಥ ರಚನೆ, ಸರಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಲ್ಲಕ್ಕಿ, ಮಧ್ಯಪ್ರದೇಶಕ್ಕೆ ರಾಮನ ಪಾದುಕೆ ಸೇರಿದಂತೆ ಹೊಯ್ಸಳ ಶೈಲಿ, ಚೋಳ ಶೈಲಿ, ಚಾಲುಕ್ಯ ಶೈಲಿ ಸೇರಿಮೊದಲಾದ ಪಾರಂಪರಿಕ ಶೈಲಿಯ ವಿಗ್ರಹಗಳ ರಚನೆ ಮಾಡಿರುವುದು ಅವರ ಹೆಗ್ಗಳಿಕೆ.

''ನಮ್ಮ ಗುರುಗಳಾದ ಸಾಗದ ವಿಪಿನ್ ಬದೋರಿಯಾ ಅವರ ಮೂಲಕ ರಾಮಜನ್ಮಭೂಮಿಗೆ ಕಾಲಿರಿಸುವ ಅವಕಾಶ ಮಾತ್ರವಲ್ಲದೆ ಬಾಲರಾಮನ ವಿಗ್ರಹ ನಿರ್ಮಾಣದ ಸೌಭಾಗ್ಯ ದೊರೆತಿರುವುದು ನನ್ನ ಶಿಲ್ಪ ಕಲೆಯ ಅತ್ಯಂತ ಪವಿತ್ರ ಕ್ಷಣವಾಗಿದೆ. ಈ ಅವಕಾಶ ನನ್ನೂರಿನ ನಾಳ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದ ವರಪ್ರಸಾದವಾಗಿದೆ'' ಎಂದು ಜಯಚಂದ್ರ ಆಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕೆಲಸ ಹೇಗಿತ್ತು?; ಗಂಗಾವತಿಯ ಶಿಲ್ಪಿ ಪ್ರಶಾಂತ ಸೋನಾರ್ ಹೇಳಿದ್ದೇನು?

Last Updated : Jan 5, 2024, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.