ETV Bharat / state

'ಬ್ಯೂಟಿ ಆಫ್ ಮದರ್ ನೇಚರ್' ಫೋಟೊಶೂಟ್ ವೈರಲ್ : ಸೌಂದರ್ಯ ಕಲಾವಿದೆ ಚೇತನಾ ಕೈಚಳಕ

ಈ ಹಿಂದೆ ರಿಯಲಿಸ್ಟಿಕ್ ಲಯನ್ ಫೇಸ್ ಪೈಂಟಿಂಗ್ ಫೋಟೊಶೂಟ್ ಮಾಡಿ ಗಮನಸೆಳೆದಿದ್ದ ಮಂಗಳೂರಿನ ಸೌಂದರ್ಯ ಕಲಾವಿದೆ ಚೇತನಾ. ಎಸ್​, ದೀಪಾವಳಿಗೆ ಮತ್ತೊಂದು ವಿಶಿಷ್ಟ ಪರಿಕಲ್ಪನೆಯೊಂದಿಗೆ ಪೋಟೋಶೂಟ್​ ಮಾಡಿಸಿದ್ದಾರೆ.

'Beauty of Mother Nature' Photoshoot Viral
'ಬ್ಯೂಟಿ ಆಫ್ ಮದರ್ ನೇಚರ್' ಪರಿಕಲ್ಪನೆ
author img

By

Published : Nov 15, 2020, 5:57 PM IST

Updated : Nov 15, 2020, 6:32 PM IST

ಮಂಗಳೂರು : ದೀಪಾವಳಿ ಹಬ್ಬದಲ್ಲಿ ದೀಪಕ್ಕೆಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಭೂಮಿ ತಾಯಿಗೂ ಇದೆ. ಬಲೀಂದ್ರ ಪೂಜೆಯ ದಿನ ನಿತ್ಯ ನಮಗೆ ಅನ್ನ ನಿಡುವ ಭೂದೇವಿಗೆ ಪೂಜೆ ನಡೆಯುತ್ತದೆ. ಇದೇ ಪರಿಕಲ್ಪನೆ ಇರಿಸಿ ನಗರದ ಚೇತನಾ ಬ್ಯೂಟಿ ಲಾಂಜ್​ನಿಂದ 'ಬ್ಯೂಟಿ ಆಫ್ ಮದರ್ ನೇಚರ್' ಎಂಬ ಫೋಟೊಶೂಟ್ ಮಾಡಲಾಗಿದೆ.

'ಬ್ಯೂಟಿ ಆಫ್ ಮದರ್ ನೇಚರ್' ಪರಿಕಲ್ಪನೆ

ಫೋಟೊಶೂಟ್​ನಲ್ಲಿ ಭೂದೇವಿಯ ಆರಾಧನೆಗೆ ಪ್ರಾಶಸ್ತ್ಯ ನೀಡಲಾಗಿದ್ದು, ದಶಭುಜೆಯಾಗಿ ಭೂದೇವಿಯನ್ನು ಚಿತ್ರಿಸಲಾಗಿದೆ. ಪ್ರಕೃತಿಯ ಸೊಗಸಿನಂತೆ ಹಸುರುಡುಗೆಯನ್ನು ಉಟ್ಟಿರುವ ರೂಪದರ್ಶಿಯರ ಹತ್ತು ಕೈಗಳಲ್ಲಿಯೂ ಬಳ್ಳಿ, ಎಲೆಗಳನ್ನು ಚಿತ್ರಿಸಲಾಗಿದೆ. ಭೂದೇವಿಯನ್ನು ಸಂಕೇತಿಸುವ ರೂಪದರ್ಶಿಯ ತಲೆಯ ಮೇಲೆ ಹೂಗುಚ್ಚವನ್ನಿರಿಸಿ ಅದರ ಮೇಲೆ ಗ್ಲೋಬ್, ದೀಪ ಇರಿಸಲಾಗಿದೆ. ಕೈಗಳಲ್ಲಿ ಸಂಪತ್ತನ್ನು ಪ್ರತಿನಿಧಿಸುವ ಬಂಗಾರದ ಕುಂಭಾರತಿಯನ್ನು ಇರಿಸಲಾಗಿದೆ. ಉಳಿದಿಬ್ಬರು ರೂಪದರ್ಶಿಗಳು ಭತ್ತದ ಪೈರನ್ನಿರಿಸಿ, ದೀಪ ಬೆಳಗಿಸಿ ಭೂಮಿದೇವಿಗೆ ಕುಂಭಾರತಿ ಬೆಳಗಿ ನಿತ್ಯವೂ ಅನ್ನವನ್ನೀಯುವುದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ನಮಿಸುವಂತೆ ಚಿತ್ರಿಸಲಾಗಿದೆ.

ಚೇತನಾ ಬ್ಯೂಟಿ ಲಾಂಜ್​ನ ಮುಖ್ಯಸ್ಥೆ ಸೌಂದರ್ಯ ಕಲಾವಿದೆ ಚೇತನಾ.ಎಸ್ ಅವರ ಪರಿಕಲ್ಪನೆಯಲ್ಲಿ ಈ ಫೋಟೊಶೂಟ್ ನಡೆದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಬನ್ನಿ ಎಂಬ ಕಲ್ಪನೆಯಲ್ಲಿ ನಮಗೆ ನಿತ್ಯವೂ ಅನ್ನವನ್ನು ನೀಡುವ ಭೂಮಿ ತಾಯಿ, ಪ್ರಕೃತಿ ಮಾತೆಗೆ ಋಣಿಯಾಗಿರೋಣ ಎಂಬ ಮಹತ್ತರವಾದ ಅರ್ಥ ಬರುವಂತೆ ಫೋಟೊಶೂಟ್ ಮಾಡಲಾಗಿದೆ.

ಸುಮಾರು ಐದಾರು ಗಂಟೆಗಳ ಪ್ರಯತ್ನದಲ್ಲಿ ಈ ರೂಪದರ್ಶಿಯರನ್ನು ಚೇತನಾ ಅವರು ಮೇಕಪ್ ಮಾಡಿ ತಯಾರು ಮಾಡಿದ್ದಾರೆ. ಈ ಹಿಂದೆ ನವರಾತ್ರಿ ಸಂದರ್ಭದಲ್ಲಿ ಚೇತನಾ ಅವರು ಮಾಡಿರುವ ರಿಯಲಿಸ್ಟಿಕ್ ಲಯನ್ ಫೇಸ್ ಪೈಂಟಿಂಗ್ ಫೋಟೊಶೂಟ್ ಸಖತ್ ವೈರಲ್ ಆಗಿತ್ತು. ಇದೇ ಪ್ರೇರಣೆಯಿಂದ ದೀಪಾವಳಿಗೆ ಭೂದೇವಿಗೆ ಋಣಿಯಾಗುವ ಈ ಫೋಟೊಶೂಟ್ ಮಾಡಿದ್ದಾರೆ. 'ಬ್ಯೂಟಿ ಆಫ್ ಮದರ್ ನೇಚರ್'ನ ಫೋಟೊಶೂಟ್​ ಛಾಯಾಗ್ರಹಕ ಪುನೀತ್ ಮಾಡಿದ್ದಾರೆ. ವಿಡಿಯೋಗ್ರಫಿಯನ್ನು ಶ್ರೀಪ್ರಸಾದ್ ನಡೆಸಿದ್ದಾರೆ. ಏಳು ಮಂದಿ ರೂಪದರ್ಶಿಯರು ಈ ಫೋಟೊಶೂಟ್​ನಲ್ಲಿ‌ ಭಾಗವಹಿಸಿದ್ದಾರೆ‌.

ಮಂಗಳೂರಿನ ಪ್ರಸಿದ್ಧ ಸೌಂದರ್ಯ ಕಲಾವಿದೆಯಾಗಿರುವ ಚೇತನಾ ಎಸ್. ಈ ಬಗ್ಗೆ ಮಾತನಾಡಿ, ನರಕಾಸುರನ ತಾಯಿ ಭೂದೇವಿ, ಈ ಭೂದೇವಿಯ ಮುಂದಿನ ಅವತಾರ ಸತ್ಯಭಾಮೆ. ಆಕೆಯಿಂದಲೇ ಲೋಕ ಕಂಟಕನಾದ ನರಕಾಸುರನ ವಧೆಯಾಗುತ್ತದೆ. ಇದೇ ಪರಿಕಲ್ಪನೆಯಲ್ಲಿ ನಾನು ಭೂದೇವಿಯ ಚಿತ್ರಣ ಮಾಡಿ 'ಬ್ಯೂಟಿ ಆಫ್ ಮದರ್ ನೇಚರ್' ಎಂಬ ಫೋಟೊಶೂಟ್ ಮಾಡಿದ್ದೇನೆ. ಈಗಾಗಲೇ ಈ ಫೋಟೋವನ್ನು ಇನ್​ಸ್ಟ್ರಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಕಮೆಂಟ್​ಗಳೂ ಬಂದಿವೆ ಎಂದು ಹೇಳಿದ್ದಾರೆ.

Last Updated : Nov 15, 2020, 6:32 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.