ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗಿನ ಭಾಗ ಅಭಿವೃದ್ಧಿಯಾಗುತ್ತಿದ್ದು, ಅದರಲ್ಲಿ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಇಂದು ವೀಕ್ಷಿಸಿದರು.
ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ಒಟ್ಟು 19.85 ಕಿ.ಮೀ. ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಇದರಲ್ಲಿ 16 ಕಿ.ಮೀ. ಡಾಂಬರು ಹಾಕಲಾಗುತ್ತಿದೆ. ಈ ರಸ್ತೆ 10 ಮೀಟರ್ ಅಗಲವಿದ್ದು, ಈಗಾಗಲೇ 12 ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟಿನವರೆಗೆ 4.85 ಕಿ.ಮೀ. ದೂರ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಒಂದು ಪಾರ್ಶ್ವದ 7 ಮೀಟರ್ ಅಗಲದಲ್ಲಿ ಕೆಲಸ ನಡೆಯುತ್ತಿದ್ದು, ಜೂನ್ ಒಳಗೆ ಬಿಟ್ಟುಕೊಡಲಾಗುತ್ತದೆ ಎಂದು ಹೆದ್ದಾರಿ ಇಲಾಖೆಯ ಎಇಇ ರಮೇಶ್ ಅವರು ಈ ಸಂದರ್ಭ ಸಂಸದರಿಗೆ ವಿವರಿಸಿದರು.
ಈ ವೇಳೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಮತ್ತಿತರರು ಜೊತೆಗಿದ್ದರು.