ETV Bharat / state

ಕಡಿಮೆಯಾದ ಸಂಬಳ, ಕೆಲಸಕ್ಕೂ ಕುತ್ತು: ಮೆಸ್ಕಾಂ ಮೀಟರ್ ರೀಡರ್ ಗಳ ಅಳಲು - ಮೆಸ್ಕಾಂ ಮೀಟರ್ ರೀಡರ್ ಗಳ ಸಮಸ್ಯೆ

ಮೆಸ್ಕಾಂ ನ ಮೀಟರ್ ಓದುವವರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದನೆ ದೊರಕಿಲ್ಲ. ಇಲಾಖೆ ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮೆಸ್ಕಾಂ ಮೀಟರ್ ರೀಡರ್ ಗಳು ಒತ್ತಾಯಿಸಿದ್ದಾರೆ.

Mescom meter readers problem
Mescom meter readers problem
author img

By

Published : Aug 20, 2020, 8:28 PM IST

ಬಂಟ್ವಾಳ: ಮೆಸ್ಕಾಂ ಮೀಟರ್ ರೀಡರ್ ಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಗುತ್ತಿಗೆ ಬೇರೆಯವರಿಗೆ ಹೋಗಿದೆ. ಈ ಹಿಂದೆ ಒಬ್ಬರಿಗೆ ನೀಡುತ್ತಿದ್ದ ವೇತನವನ್ನು ಇದೀಗ ಇಬ್ಬಿಬ್ಬರು ಹಂಚಿಕೊಳ್ಳಿ ಎಂದು ಗುತ್ತಿಗೆದಾರರು ಹೇಳುತ್ತಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಂತೆ ಮೆಸ್ಕಾಂ ಮೀಟರ್ ರೀಡರ್ ಗಳು ಒತ್ತಾಯಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ್ ಸೇವಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು, ಹಿಂದಿನ ಗುರಿಯನ್ನು ಗ್ರಾಮೀಣ ಭಾಗದಲ್ಲಿ 2500, ನಗರದಲ್ಲಿ 3500ಕ್ಕೆ ವಿಸ್ತರಿಸಿ, ಹೆಚ್ಚುವರಿ ರೀಡರ್ ಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಕನಿಷ್ಟ ವೇತನ ನೀಡದೇ ಇರುವ ಕುರಿತು ನಾವು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದೇವೆ, ಜೊತೆಗೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಕೆಲಸ ನಿರ್ವಹಿಸುವ ಗುತ್ತಿಗೆ ಮಾಪಕ ಓದುಗರಿಗೆ ವರ್ಷ ಹೋದಂತೆ ವೇತನ ಕಡಿಮೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆ. 25 ರಿಂದ ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಚೇರಿಯ ಎದುರು ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮೀಟರ್ ರೀಡರ್ ಆಗಿ ಕಾರ್ಯ ನಿರ್ವಹಿಸುವ ಚಂದ್ರಶೇಖರ್ ವಿಟ್ಲ, ಜಯರಾಮ, ಗೋಪಾಲ ನೇರಳಕಟ್ಟೆ, ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.