ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಪಣಂಬೂರು ಬೀಚ್ನಲ್ಲಿ ನಾಪತ್ತೆಯಾಗಿದ್ದಾನೆ.
ಬೆಂಗಳೂರಿನ ದಿನೇಶ್ (20) ಸಮುದ್ರಪಾಲಾದ ಯುವಕ. ದಿನೇಶ್ ತನ್ನ ಐವರು ಸ್ನೇಹಿತರಾದ ಶ್ರೀನಿವಾಸ, ಪ್ರಶಾಂತ್, ಸುನಿಲ್, ಸುದೀಪ್, ಪ್ರಜ್ವಲ್ ಹಾಗೂ ಸೀನಾ ಎಂಬುವರೊಂದಿಗೆ ನಿನ್ನೆ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಮಂಗಳೂರಿಗೆ ಬಂದಿದ್ದರು. ಇಂದು (ಸೋಮವಾರ) ಮಧ್ಯಾಹ್ನ ಪಣಂಬೂರು ಬೀಚ್ನಲ್ಲಿ ಮೋಜು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ದಿನೇಶ್ ಸಮುದ್ರ ಸಮೀಪ ಆಟವಾಡುತ್ತಿದ್ದ ವೇಳೆಗೆ ಬಲವಾದ ಅಲೆಯೊಂದು ಬಂದು ಆತನನ್ನು ಎಳೆದುಕೊಂಡು ಹೋಗಿದೆ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಪಣಂಬೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗಡಿಯಲ್ಲಿ ದೇಶ ಕಾಯೋ ಯೋಧ.. ಊರಲ್ಲಿ ಒಂದಲ್ಲ, ಎರಡಲ್ಲ ಮೂರು ಮದುವೆಯಾಗಿ ವಂಚಿಸಿದ ಭೂಪ!