ಮಂಗಳೂರು: ಕೇರಳ ಸರ್ಕಾರ ಪ್ರಸ್ತಾಪಿಸಿದ್ದ ನಾರಯಣ ಗುರು ಟ್ಯಾಬ್ಲೋವನ್ನು ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ನಲ್ಲಿ ಅವಕಾಶ ಕಲ್ಪಿಸದೆ ಉದ್ಭವಿಸಿದ ವಿವಾದದ ಬೆನ್ನಲ್ಲೇ ನಗರದ ಲೇಡಿಹಿಲ್ ವೃತ್ತಕ್ಕೆ ಬಜರಂಗದಳ ಕಾರ್ಯಕರ್ತರು ನಾರಾಯಣ ಗುರು ವೃತ್ತ ಎಂಬ ನಾಮಫಲಕ ಅಳವಡಿಸಲಾಗಿದೆ.
ನವದೆಹಲಿಯ ಪರೇಡ್ನಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇರಳದ ನಾರಾಯಣ ಗುರು ಅವರ ಟ್ಯಾಬ್ಲೋ ಅವಕಾಶ ಕಲ್ಪಿಸದೆ ಇರುವುದರ ವಿರುದ್ಧ ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ನಾರಾಯಣ ಗುರು ಅವರನ್ನು ಬೆಂಬಲಿಸಿ ಜಾಥಾ ನಡೆಸಿದ್ದವು. ಇದರ ನಡುವೆ ಬಜರಂಗದಳ ಕಾರ್ಯಕರ್ತರು ನಗರದ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಫಲಕ ಅಳವಡಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 48,905 ಮಂದಿಗೆ ಕೋವಿಡ್ ಸೋಂಕು; 39 ಸೋಂಕಿತರು ಬಲಿ
ಲೇಡಿಹಿಲ್ ವೃತ್ತ ಹೆಸರನ್ನು ತೆಗೆದು ನಾರಾಯಣ ಗುರು ಹೆಸರಿಡುವ ಮಹಾನಗರ ಪಾಲಿಕೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿ ವಿವಾದವೇ ಏರ್ಪಟ್ಟಿತ್ತು. ಇದೀಗ ಮತ್ತೊಮ್ಮೆ ನಾರಾಯಣ ಗುರುಗಳ ವಿಚಾರದಲ್ಲಿ ಏರ್ಪಟ್ಟಿರುವ ವಿವಾದದ ನಡುವೆ ಬಜರಂಗದಳ ಏಕಾಏಕಿ ನಾಮಫಲಕ ಹಾಕುವ ಮೂಲಕ ಚರ್ಚೆಗೆ ಕಾರಣವಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ