ETV Bharat / state

ದೂರು ದಾಖಲಿಸಲು ಹೋದ ಅಪ್ರಾಪ್ತೆಯ ಮೇಲೆ ಪೊಲೀಸರಿಂದಲೇ ಹಲ್ಲೆ: ಮೂವರ ವಿರುದ್ಧ ಪ್ರಕರಣ ದಾಖಲು.. - Bajpe station police sliced on women

ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬನಿಂದ ಲೈಂಗಿಕ ದೌರ್ಜನ್ಯವಾಗಿದೆ ಎಂದು ದೂರು ನೀಡಲು ಹೋದ ಬಾಲಕಿಯ ಮೇಲೆ ಮಂಗಳೂರು ನಗರದ ಬಜ್ಪೆ ಠಾಣಾ ಮಹಿಳಾ ಪೊಲೀಸರು ಹಲ್ಲೆ ಮಾಡಿದ್ದಾರೆ.

bajpe-police-sliced-on-women-at-mangalore
ಅಪ್ರಾಪ್ತೆ
author img

By

Published : Nov 7, 2020, 5:31 PM IST

Updated : Nov 7, 2020, 6:06 PM IST

ಮಂಗಳೂರು: ತನ್ನ ಮೇಲೆ ಯುವಕನೊಬ್ಬನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಲು ಹೋದ ಅಪ್ರಾಪ್ತೆಯ ಮೇಲೆಯೇ ನಗರದ ಬಜ್ಪೆ ಠಾಣಾ ಮಹಿಳಾ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಹಲ್ಲೆ ಕುರಿತು ಬಾಲಕಿ, ಸಂತ್ರಸ್ತೆಯ ತಂದೆ ಹಾಗೂ ವಕೀಲರು ಮಾತನಾಡಿದರು

ತಮಗೆ ನ್ಯಾಯ ದೊರಕಿಸುವಂತೆ ದೌರ್ಜನ್ಯಕ್ಕೊಳಗಾದ ಬಾಲಕಿಯ ಹೆತ್ತವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಜ್ಪೆ ಠಾಣೆಯ ಮೂವರು ಮಹಿಳಾ ಪೊಲೀಸರ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ನಗರದ ಹೊರವಲಯದಲ್ಲಿರುವ ಗಂಜಿಮಠ ಬಡಗ ಉಳಿಪಾಡಿ ಬಳಿಯ ನಿವಾಸಿ ವಾಣಿ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿಗೆ ಮೂಡುಬಿದಿರೆ ಇರುವೈಲು ನಿವಾಸಿ ಶ್ರೀಕಾಂತ್ ನಾಗೇಶ್ ಎಂಬಾತ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಾನೆ‌. ಈತನು ಆಕೆಗೆ ದೂರವಾಣಿ ಮೂಲಕ ಕರೆ ಮಾಡಿ ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿರುವುದಲ್ಲದೆ ಮನೆಗೂ ಬಂದು ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಬಾಲಕಿಯ ಹೆತ್ತವರು ತಮ್ಮ ಮಗಳಿಗೆ ತೊಂದರೆ ಕೊಡಬೇಡ, ಮನೆಗೆ ಬರುವುದು ಬೇಡ ಎಂದು ಎಷ್ಟು ಬುದ್ಧಿವಾದ ಹೇಳಿದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ.

bajpe-police-sliced-on-women-at-mangalore
ಸಿಬ್ಬಂದಿ ವಿರುದ್ಧ ದೂರು
ಈ ಕುರಿತು ಸಂತ್ರಸ್ತೆಯ ತಂದೆ ಮಾತನಾಡಿ, ನವೆಂಬರ್ 3ರಂದು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಮರುದಿನ ಆರೋಪಿ ಶ್ರೀಕಾಂತ್ ನಾಗೇಶ್ ತನ್ನ ವಕೀಲರೊಂದಿಗೆ ಠಾಣೆಗೆ ಹಾಜರಾಗಿದ್ದ. ಅಂದು ಸಂತ್ರಸ್ತೆಯನ್ನು ದೂರು ಬರೆಸುವ ನೆಪದಲ್ಲಿ ಒಬ್ಬಳನ್ನೇ ಒಳಗೆ ಕರೆಸಿದ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟುಗಾಲಿನಲ್ಲಿ ಒದ್ದು, ಲಾಠಿಯಲ್ಲಿ ಎರಡೂ ಕೈಗಳಿಗೆ, ಕಾಲಿಗೆ, ಪಾದದಡಿಗೆ ಹೊಡೆದಿದ್ದಾರೆ. ಪರಿಣಾಮ ಆಕೆ ನಡೆಯಲಾರದ ಸ್ಥಿತಿಗೆ ತಲುಪಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.ಈ ಬಗ್ಗೆ ನ್ಯಾಯವಾದಿ ಹಾಗೂ ಮಂಗಳೂರು ಮನಪಾ ಸದಸ್ಯ ಎ.ಸಿ. ವಿನಯ್ ರಾಜ್ ಮಾತನಾಡಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ ಸಂದರ್ಭದಲ್ಲಿ ಪೊಲೀಸರು ಆರೋಪಿಯ ಮೇಲೆ ಪೊಕ್ಸೊ ಕಾಯ್ದೆ ದಾಖಲಿಸಬೇಕಿತ್ತು. ಆದರೆ ಪೊಲೀಸರು ಮರುದಿನ ಆರೋಪಿಯನ್ನು ಕರೆಸಲಾಗುತ್ತದೆ‌. ಅಪ್ರಾಪ್ತೆಯನ್ನು ಕರೆತನ್ನಿ ಎಂದು ಹೆತ್ತವರಿಗೆ ತಿಳಿಸಿದ್ದರು. ಆದರೆ ಅಂದು ಅಲ್ಲಿ ನಡೆದದ್ದೇ ಬೇರೆ. ಅಪ್ರಾಪ್ತೆಯ ಮೇಲೆ ಯಾವುದೇ ಕಾರಣವಿಲ್ಲದೆ ಅಮಾನುಷವಾಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ‌ ಎಂದಿದ್ದಾರೆ.

Last Updated : Nov 7, 2020, 6:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.