ETV Bharat / state

ಹಲ್ಲೆ ಆರೋಪ.. ನಟ ವಿನೋದ್ ಆಳ್ವ ಬೆಳಗ್ಗೆ ಬಂಧನ, ಮಧ್ಯಾಹ್ನದ ವೇಳೆಗೆ ಮಧ್ಯಂತರ ಜಾಮೀನು - ನಟ ವಿನೋದ್ ಆಳ್ವಗೆ ಮಧ್ಯಂತರ ಜಾಮೀನು

ವಿನೋದ್ ಆಳ್ವ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಅವರ ಪರವಾಗಿ ವಾದ ಮಾಡಿದ ನ್ಯಾಯಾವಾದಿ ನರಸಿಂಹಪ್ರಸಾದ್, ಉದಯ್‌ಗೆ ಜಾತಿ ನಿಂದನೆ ಮಾಡಿಲ್ಲ. ಹಾಗಾಗಿ, ಇದೊಂದು ಜಾತಿ ನಿಂದನೆ ಪ್ರಕರಣಕ್ಕೆ ಬರುವುದಿಲ್ಲ ಎಂದು ವಾದಿಸಿದರು..

Bail
Bail
author img

By

Published : Apr 21, 2021, 6:50 PM IST

ಪುತ್ತೂರು : ಹಲ್ಲೆ ಆರೋಪದಡಿ ಇಂದು ಬೆಳಗ್ಗೆ ಸಂಪ್ಯ ಠಾಣೆಗೆ ಶರಣಾಗಿದ್ದ ನಟ ವಿನೋದ್ ಆಳ್ವಗೆ ಮಧ್ಯಾಹ್ನದ ವೇಳೆಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪಡವನ್ನೂರು ಗ್ರಾಮದ ಕೊರಗಪ್ಪ ನಾಯ್ಕ್ ಎಂಬುವರು ಜಾತಿ ನಿಂದನೆ ಆರೋಪದಡಿ ನಟ ವಿನೋದ್ ಆಳ್ವ ವಿರುದ್ಧ ಸಂಪ್ಯ ಠಾಣೆಗೆ ದೂರು ನೀಡಿದ್ದರು. ವಿನೋದ್ ಆಳ್ವ ಪಡುಮಲೆಯ ನಾಗಬ್ರಹ್ಮ ದೇವಸ್ಥಾನದ ರಸ್ತೆ ಕಾಮಗಾರಿ‌ ಮಾಡಿಸುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನಾನು, ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಬರುತ್ತಿಲ್ಲ ಎಂದು ಅವರಿಗೆ ಹೇಳಿದ್ದೆ.

ಈ ವೇಳೆ ಅವರು, ನೀರು ಬಾರದಿದ್ದರೆ ನನ್ನಲ್ಲಿ ಕೇಳುವುದಲ್ಲ ಎಂದು ಗದರಿಸಿ ಹಲ್ಲೆ ನಡೆಸಿದರು. ಅವರ ಜೊತೆಯಲ್ಲಿದ್ದ ದೀಕ್ಷಿತ್ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂದು ತಿಳಿದಿದ್ದರೂ ವಿನೋದ್ ಆಳ್ವ ಮತ್ತು ದೀಕ್ಷಿತ್ ಅವರು ಉದ್ದೇಶ ಪೂರ್ವಕವಾಗಿ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಉದಯ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಕಲಂ 323, 504, 506, 34, ಐಪಿಸಿ ಕಲಂ (3), 3 (2), ಎಸ್ ಸಿ, ಎಸ್ ಟಿ ಆ್ಯಕ್ಟ್ 2015ರಂತೆ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ದೀಕ್ಷಿತ್ ಅವರನ್ನು ಆರಂಭದಲ್ಲೇ ಪೊಲೀಸರು ಬಂಧಿಸಿದ್ದರು.

ಏ.21ರಂದು ನಟ ವಿನೋದ್ ಆಳ್ವ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಧ್ಯಾಹ್ನದ ವೇಳೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾತಿ ನಿಂದನೆ ಪ್ರಕರಣ ಬರಲ್ಲ ಎಂದು ವಕೀಲರ ವಾದ : ವಿನೋದ್ ಆಳ್ವ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಅವರ ಪರವಾಗಿ ವಾದ ಮಾಡಿದ ನ್ಯಾಯಾವಾದಿ ನರಸಿಂಹಪ್ರಸಾದ್, ಉದಯ್‌ಗೆ ಜಾತಿ ನಿಂದನೆ ಮಾಡಿಲ್ಲ.

ಹಾಗಾಗಿ, ಇದೊಂದು ಜಾತಿ ನಿಂದನೆ ಪ್ರಕರಣಕ್ಕೆ ಬರುವುದಿಲ್ಲ ಎಂದು ವಾದಿಸಿದರು. ಅವರ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ ಆರೋಪಿ ವಿನೋದ್ ಆಳ್ವರಿಗೆ ಏಪ್ರಿಲ್ 26ರ ತನಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.