ETV Bharat / state

ಸಾಂವಿಧಾನಿಕ ಪೀಠದ ಓರ್ವ ನ್ಯಾಯಮೂರ್ತಿ, ವಾದಿಸಿದ ಇಬ್ಬರು ವಕೀಲರು ದ.ಕನ್ನಡದವರು! - ಮಂಗಳೂರು ಸುದ್ದಿ

ಅಯೋಧ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಓರ್ವರು ಹಾಗೂ ವಕೀಲರ ತಂಡದಲ್ಲಿ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರೆಂಬುದು ಗಮನಾರ್ಹ ಸಂಗತಿ.

Mangalore judges , ಮಮಗಳೂರು ವಕೀಲರು
author img

By

Published : Nov 9, 2019, 8:17 PM IST

ಮಂಗಳೂರು : ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ ಸಾಂವಿಧಾನಿಕ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಓರ್ವರು ಹಾಗೂ ವಕೀಲರ ತಂಡದಲ್ಲಿದ್ದ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.

ರಾಮಮಂದಿರ ವಿವಾದಿತ ಭೂಮಿಯ ಐತಿಹಾಸಿಕ ತೀರ್ಪು ನೀಡಿದ ಪಂಚಸದಸ್ಯ ಪೀಠದ ಸದಸ್ಯರಲ್ಲಿ ಓರ್ವರಾಗಿರುವ ನ್ಯಾ.ಅಬ್ದುಲ್ ನಜೀರ್ ಜೆ.ಜೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡುಬಿದಿರೆ ತಾಲೂಕಿನ ಬೆಳುವಾಯಿಯವರು‌. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ 2017ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಈ ಹಿಂದೆ ತ್ರಿವಳಿ ತಲಾಖ್ ಪ್ರಕರಣದಲ್ಲೂ ಪ್ರಬುದ್ಧ ತೀರ್ಪು ನೀಡಿದ ನ್ಯಾಯಪೀಠದಲ್ಲಿಯೂ ಇವರಿದ್ದರು ಎನ್ನುವುದು ಗಮನಾರ್ಹ ವಿಚಾರ.

ಇನ್ನು ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಹಾಗೂ ಸುಳ್ಯ ತಾಲೂಕಿನ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಶರೀಫ್ ಎಂಬುವವರು ವಾದಿಸಿದ್ದಾರೆ.

ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ ಅಬ್ದುಲ್ ರಹಿಮಾನ್ ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಸುನ್ನಿ ವಕ್ಫ್ ಮಂಡಳಿಯು ಬಾಬ್ರಿ ಮಸೀದಿ ಪರ ವಾದ ಮಂಡಿಸಲು ದೇಶದ ಪ್ರಬಲ ವಕೀಲರ ತಂಡವನ್ನು ಆಯ್ಕೆ ಮಾಡಿತ್ತು. ಈ ತಂಡದ ಸದಸ್ಯರಲ್ಲಿ ಅಬ್ದುಲ್‌ ರಹಿಮಾನ್ ಕೂಡಾ ಒಬ್ಬರಾಗಿದ್ದಾರೆ.

ವಕೀಲ ಶರೀಫ್ ಸುಳ್ಯದ ಎನ್​ಎಂಸಿಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್​ಎಲ್​ಬಿ ಮುಗಿಸಿದ್ದು, ಸುಪ್ರೀಂಕೋರ್ಟ್​ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Intro:ಮಂಗಳೂರು: ವಿವಾದಿತ ರಾಮಜನ್ಮ ಭೂಮಿ ಅಯೋಧ್ಯೆಯ ಕುರಿತಾದ ತೀರ್ಪನ್ನು ನೀಡಿದ ಪಂಚ ಸದಸ್ಯರ ಪೀಠದ ನ್ಯಾಯಮೂರ್ತಿ ಗಳಲ್ಲಿ ಓರ್ವರು ಹಾಗೂ ವಕೀಲರ ತಂಡದಲ್ಲಿ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರಾಗಿರೋದು ಗಮನಾರ್ಹ ಸಂಗತಿಯಾಗಿದೆ.

ರಾಮಮಂದಿರ ವಿವಾದಿತ ಭೂಮಿಯ ಐತಿಹಾಸಿಕ ತೀರ್ಪಿನ ಪಂಚ ಸದಸ್ಯ ಪೀಠದಲ್ಲಿ ಓರ್ವರಾಗಿರುವ ನ್ಯಾಯಮೂರ್ತಿ ಅಬ್ದುಲ್ ನಜೀರ್ ಜೆ.ಜೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡುಬಿದಿರೆ ತಾಲೂಕಿನ
ಬೆಳುವಾಯಿಯವರು‌. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ ಅವರು 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಈ ಹಿಂದೆ ತ್ರಿವಳಿ ತಲಾಖ್ ಕೇಸಿನಲ್ಲಿ ಪ್ರಬುದ್ಧ ತೀರ್ಪು ನೀಡಿದ ನ್ಯಾಯಪೀಠದಲ್ಲಿಯೂ ಅಬ್ದುಲ್ ನಜೀರ್ ಅವರಿದ್ದರು. ಸುಪ್ರೀಂಕೋರ್ಟ್ ನೀಡಿದ

ಇದಲ್ಲದೆ ಬಾಬರಿ ಮಸೀದಿ ಪರ ವಾದ ನಡೆಸಲು ದೇಶದ ಘಟಾನುಘಟಿ ವಕೀಲರ ನೇಮಕಾತಿಯೂ ನಡೆದಿತ್ತು.
ಆ ವಕೀಲರ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಹಾಗೂ ಸುಳ್ಯ ತಾಲೂಕಿನ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಶರೀಫ್ ಎಂಬವರು ವಾದಿಸಿದ್ದಾರೆ.

Body:ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದ ಅಬ್ದುಲ್ ರಹಿಮಾನ್, ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಸುನ್ನಿ ವಕ್ಫ್ ಮಂಡಳಿಯು ಬಾಬರಿ ಮಸೀದಿಯ ಪರ ವಾದ ಮಂಡಿಸಲು ದೇಶದ ಪ್ರಬಲ ವಕೀಲರನ್ನು ನಿಯುಕ್ತಿ ಗೊಳಿಸಿತ್ತು. ಈ ಪೈಕಿ ಅಬ್ದುಲ್‌ ರಹಿಮಾನ್ ಕೂಡಾ ಓರ್ವರಾಗಿದ್ದರು.

ಶರೀಫ್, ಸುಳ್ಯದ ಎನ್.ಎಂ.ಸಿ. ಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್.ಎಲ್.ಬಿ. ಮುಗಿಸಿಕೊಂಡು 2018 ಫೆಬ್ರವರಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ಅಯೋಧ್ಯೆ ರಾಮಜನ್ಮಭೂಮಿಯ ಬಗ್ಗೆ ಮಹತ್ವದ ತೀರ್ಪು ಹೊರಬಂದ ನ್ಯಾಯಪೀಠದಲ್ಲಿ ಮೂವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿರೋದು ದೇಶದ ಚಿತ್ತವೇ ಇತ್ತಕಡೆ ಬೀರುವಂತಾಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.