ಪಂಜ/ಸುಳ್ಯ: ಕಾರೊಂದು ಆಟೋ ಮತ್ತು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.
ಸವಾರ ಎಣ್ಮೂರು ನಿವಾಸಿ ರಫೀಕ್. ಸುಬ್ರಹ್ಮಣ್ಯ-ಪುತ್ತೂರು ಮಾರ್ಗದ ಪಂಜ ಸಮೀಪದ ಕುಳಾಯಿತ್ತೋಡಿಯಲ್ಲಿ ಈ ಘಟನೆ ಸಂಭವಿಸಿದೆ.
ಪಂಜದಿಂದ ನಿಂತಿಕಲ್ಲು ಕಡೆಗೆ ತೆರಳುತ್ತಿದ್ದ ಕಾರು ಕುಳಾಯಿತ್ತೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಗುದ್ದಿದ್ದಾನೆ. ರಿಕ್ಷಾವು ಮಗುಚಿ ಬಿದ್ದಿದೆ. ಬೈಕ್ ಕಾರಿನಲ್ಲಿ ಸಿಲುಕಿಕೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಬೆಳ್ಳಾರೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.