ಬಂಟ್ವಾಳ: ಸುಮಾರು ಒಂದು ತಿಂಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕುಡ್ತಮುಗೇರು ಎಂಬಲ್ಲಿ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ದಿನೇಶ್ ಕನ್ಯಾನ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ: ಬಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು!
16 ವರ್ಷದ ಬಾಲಕನೋರ್ವನನ್ನು ಆರೋಪಿ ಸಹಿತ ಮೂವರು ಬೈಕಿನಲ್ಲಿ ಬಂದು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿ, ಶಾಲಾ ಮೈದಾನವೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದರು. ಅಲ್ಲದೆ, ಜೇಬಿನಲ್ಲಿದ್ದ ಹಣ ಕಸಿದುಕೊಂಡಿದ್ದಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಬಾಲಕನು ಆರೋಪಿಗಳ ಭಯದಿಂದಾಗಿ ತಡವಾಗಿ ದೂರು ನೀಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 341, 367, 325, 394, 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ತನಿಖೆ ಪ್ರಗತಿಯಲ್ಲಿದ್ದು, ಪ್ರಮುಖ ಆರೋಪಿ ಸಹಿತ ಉಳಿದವರನ್ನು ಬಂಧಿಸಿದಂತಾಗಿದೆ.