ETV Bharat / state

ಬಡವರಿಗೆ ಸೀರೆ ಪಂಚೆ ವಿತರಿಸಿದ- ಉದ್ಯಮಿ ಅಶೋಕ್​ ಕುಮಾರ್ ರೈ - ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ

ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ಸೀರೆ ಪಂಚೆ ವಿತರಿಸಿದ- ಅಶೋಕ್ ಕುಮಾರ್ ರೈ
author img

By

Published : Oct 30, 2019, 8:35 AM IST

ಪುತ್ತೂರು: ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ಸೀರೆ ಪಂಚೆ ವಿತರಿಸಿದ- ಅಶೋಕ್ ಕುಮಾರ್ ರೈ
ಬೆಳಗ್ಗೆ ರೈ ಅವರ ತಾಯಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಸರಳ ರೀತಿಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಿ ಭಾಷಣಕ್ಕೆ ಪ್ರಾಮುಖ್ಯತೆ ಇರಲಿಲ್ಲ. ವಸ್ತ್ರದಾನವೇ ವಿಶೇಷವಾಗಿತ್ತು. ನೆರೆದ ಮಂದಿಗೆ ರೈ ಮತ್ತು ಅವರ ಸಂಬಂಧಿಕರು ವಸ್ತ್ರ ವಿತರಿಸಿದರು. ವಸ್ತ್ರದಾನ ಮಾಡಿ ಜನತೆಯಿಂದ ಪ್ರೀತಿಯ ಆಶೀರ್ವಾದ ಪಡೆದರು. ಈ ವಸ್ತ್ರ ವಿತರಿಸುವ ಕಾರ್ಯಕ್ರಮ ಸಂಜೆ ಏಳು ಗಂಟೆಯ ತನಕವೂ ನಡೆಯಿತು.

ಅಶೋಕ್ ಕುಮಾರ್ ರೈ ಮಾತನಾಡಿ, ದೀಪಾವಳಿಯ ಅಂಗವಾದ ಈ ಸಾಂಪ್ರದಾಯಿಕವಾಗಿ ವಸ್ತ್ರ ವಿತರಣೆಯ ಕಾರ್ಯಕ್ರಮ ಯಾವುದೇ ಹೆಸರಿಗಾಗಿ ನಡೆಸುತ್ತಿಲ್ಲ. ಇದೊಂದು ಪ್ರೀತಿ ಹಂಚುವ ಕಾರ್ಯಕ್ರಮ. ಈ ವರ್ಷ 15,000 ಮಂದಿಗೆ ಸೀರೆ ಹಾಗೂ ಪಂಚೆಯನ್ನು ವಿತರಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಸುಮಾ ಅಶೋಕ್‍ಕುಮಾರ್ ರೈ, ಸೇರಿದಂತೆ ಅವರ ಮನೆಯವರು ಭಾಗಿಯಾಗಿದ್ದರು. ಕೊಡಂಬಾಡಿಯ ರೈ ನಿವಾಸದಲ್ಲಿ ಕಳೆದ ಬಾರಿಯ ದೀಪಾವಳಿಯಂದು 12,600 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು.

Intro:Body:ದೀಪ ಸಂಭ್ರಮ-ಬಡವರಿಗೆ ಬಾಗೀನ ಅರ್ಪಣೆ
15 ಸಾವಿರ ಸೀರೆ ಪಂಚೆ ವಿತರಣೆ- ಅಶೋಕ್ ಕುಮಾರ್ ರೈ

ಪುತ್ತೂರು : ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ. ಸಾಂಪ್ರದಾಯಿಕ ರೀತಿಯಲ್ಲಿ ಬಲಿಯೇಂದ್ರನನ್ನು ಪೂಜಿಸುವ ಉತ್ಸಾಹ. ಈ ಮನೆಯಂಗಳದಲ್ಲಿ ತುಂಬಿ ತುಳುಕುವ ಜನ. ಮಹಿಳೆಯರು,ಮಕ್ಕಳು,ವೃದ್ದರು ಸೇರಿದಂತೆ ಸಹಸ್ರಾರು ಮಂದಿಯ ಸರತಿ ಸಾಲು...ಇನ್ನೊಂದೆಡೆ ನಾಟಿ ಕೋಳಿ ಪದಾರ್ಥದ ಉಪಹಾರ ಸವಿಯನ್ನುವ ಮಂದಿಯ ಖುಷಿ, ವಸ್ತ್ರದಾನ ಪಡೆದ ಮಂದಿಯಲ್ಲಿ ತುಂಬಿಕೊಂಡ ಮಂದಹಾಸ....ವಸ್ತ್ರದಾನ ಮಾಡಿದ ಮಂದಿಯಲ್ಲಿ ತುಂಬಿಕೊಂಡ ಧನ್ಯತಾ ಭಾವ... ಇದು ಪುತ್ತೂರಿನ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‍ನ ಪ್ರವರ್ತಕ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ನಡೆದ `ದೀಪಾವಳಿ ಸಂಭ್ರಮದಲ್ಲಿ ಕಂಡು ಬಂದ ಸಡಗರದ ನೋಟ.
ಬೆಳಿಗ್ಗೆ ಭಾರತ ಮಾತೆಗೆ ಅಶೋಕ್‍ಕುಮಾರ್ ರೈ ಅವರ ತಾಯಿ ಗಿರಿಜಾ.ಎಸ್ ರೈ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಸರಳ ರೀತಿಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಿ ಭಾಷಣಕ್ಕೆ ಪ್ರಾಮುಖ್ಯತೆ ಇರಲಿಲ್ಲ. ವಸ್ತ್ರದಾನವೇ ವಿಶೇಷತೆಯಾಗಿತ್ತು. ನೆರೆದ ಮಂದಿಗೆ ಅಶೋಕ್‍ಕುಮಾರ್ ರೈ ಮತ್ತು ಅವರ ಸಂಬಂಧಿಕರು ವಸ್ತ್ರ ವಿತರಿಸಿದರು. ವಸ್ತ್ರದಾನ ಮಾಡಿ ಜನತೆಯಿಂದ ಪ್ರೀತಿಯ ಆಶೀರ್ವಾದ ಪಡೆದರು. ಈ ವಸ್ತ್ರ ವಿತರಿಸುವ ಕಾರ್ಯಕ್ರಮ ಸಂಜೆ ಗಂಟೆಯ ತನಕವೂ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.
ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಪಂಚೆ ಮತ್ತು ಶಾಲು, ಮಕ್ಕಳಿಗೆ ಶಾಲು ನೀಡಿ ಪ್ರೀತಿ ಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆಯುವ ಕ್ಷಣ ಅಪೂರ್ವವಾಗಿತ್ತು. ಮಹಿಳೆಯರು,ಮಕ್ಕಳು ಸೇರಿದಂತೆ ಸಹಸ್ತ್ರಾರು ಮಂದಿ ರಸ್ತೆ ಬದಿಯಿಂದಲೇ ಸರದಿ ಸಾಲಿನಲ್ಲಿ ನಿಂತು ವಸ್ತ್ರ ಹಾಗೂ ಆರ್ಥಿಕ ಸಹಾಯ ಪಡೆಯುವ ದೃಶ್ಯ ಈ ಸಂಭ್ರಮಕ್ಕೆ ವಿಶೇಷ ಕಳೆ ನೀಡಿತ್ತು.
ದೀಪಾವಳಿ ಅಂಗವಾಗಿ 15000 ವಸ್ತ್ರ ವಿತರಣೆ
ರೈ ಎಸ್ಟೇಟ್ ಎಜ್ಯುಕೇಷನಲ್ ಆಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ದೀಪಾವಳಿಯ ಅಂಗವಾದ ಈ ಸಾಂಪ್ರದಾಯಿಕವಾಗಿ ವಸ್ತ್ರ ವಿತರಣೆಯ ಕಾರ್ಯಕ್ರಮ ಯಾವುದೇ ಹೆಸರಿಗಾಗಿ ನಡೆಸುತ್ತಿಲ್ಲ. ಇದೊಂದು ಪ್ರೀತಿ ಹಂಚುವ ಕಾರ್ಯಕ್ರಮ. ಈ ವರ್ಷ 15000 ಮಂದಿಗೆ ಸೀರೆ ಹಾಗೂ ಲುಂಗಿ ಪಂಚೆಯನ್ನು ವಿತರಿಸಲಾಗುವುದು ಎಂದವರು ಹೇಳಿದರು.
ಕೋಡಿಂಬಾಡಿ ಮನೆಯಲ್ಲಿ ಹಿಂದೆ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿತ್ತು. ಕೆಲವು ವರ್ಷಗಳಿಂದ ಇದನ್ನು ಅದ್ದೂರಿಗೊಳಿಸಲಾಗಿದೆ.
ಕಳೆದ ಬಾರಿಯ ದೀಪಾವಳಿಯಂದು 12600 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇವೆ ಮಾಡುವ ಕೆಲಸ ನಡೆಸಲಾಗುತ್ತಿದೆ. ಪಡೆದದ್ದನ್ನು ಸಮಾಜಕ್ಕೆ ಸೇವೆ ರೂಪದಲ್ಲಿ ನೀಡುವ ಚಿಂತನೆ ಮೂಲಕ ಸುಮಾರು 5800 ಮಂದಿಗಳ ಸಮಸ್ಯೆಗೆ ಪರಿಹಾರ, 650 ಮಂದಿಗೆ ಮನೆ ಕಟ್ಟಲು ಸಹಾಯಧನ ವಿತರಣೆ, 76 ಕುಟುಂಬಕ್ಕೆ ಮನೆ ನಿರ್ಮಾಣ, 1500 ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್, 200ಕ್ಕೂ ಹೆಚ್ಚು ಅಂಗವಿಕಲರಿಗೆ ಸಹಾಯ, 1300 ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವ್ಯವಸ್ಥೆ, 620 ಮಂದಿಗೆ ಉಚಿತ ಟೈಲರಿಂಗ್ ತರಬೇತಿ ಮತ್ತು ಮಿಷನ್ ನೀಡಿಕೆ, 370 ಮಂದಿಗೆ ವಾಹನ ಚಾಲನಾ ತರಬೇತಿ, ಕಿಡ್ನಿ,ಕ್ಯಾನ್ಸರ್ ರೋಗಿಗಳಿಗೆ ಸಹಾಯ, ಮಂಗಳೂರಿನಲ್ಲಿರುವ 50 ಏಡ್ಸ್ ಕಾಯಿಲೆ ಪೀಡಿತ ಮಕ್ಕಳ ಪೋಷಣೆ ಸೇರಿದಂತೆ ಹಲವಾರು ಆರ್ಥಿಕ ಸಾಮಾಜಿಕ ಕಾರ್ಯಗಳನ್ನು ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಸುಮಾ ಅಶೋಕ್‍ಕುಮಾರ್ ರೈ, ಸುಬ್ರಹ್ಮಣ್ಯ ರೈ, ರಾಜಕುಮಾರ್ ರೈ, ನಳಿನಿ ಪಿ.ಶೆಟ್ಟಿ, ಪ್ರೀತಿ ರೈ, ವಿಶಾಲಾಕ್ಷಿ ರೈ ಅಶೋಕ್ ಕುಮಾರ್ ರೈ ಅವರ ಪುತ್ರಿಯರಾದ ರಿಧಿ ರೈ, ಶ್ರುಧಿ ರೈ ಮತ್ತು ಶೃತಿ ರೈ ಮತ್ತಿತರರು ಉಪಸ್ಥಿತರಿದ್ದರು. ಶಶಿಕುಮಾರ್ ಬಾಲ್ಯೊಟ್ಟು ಸ್ವಾಗತಿಸಿದರು, ರವೀಂದ್ರ ಭಂಡಾರಿ ವಂದಿಸಿದರು. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ನಿರೂಪಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.