ETV Bharat / state

ಕಾರ್ಯಕರ್ತರ ಭಾವನೆಗಳಿಗೆ ಮುಂದಿನ ದಿನಗಳಲ್ಲಿ ಫಲ ಸಿಗಲಿದೆ: ಎಂಪಿ ಸ್ಥಾನದ ಸ್ಪರ್ಧೆ ಕುರಿತು ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ - puttur news

ಇಂದು ಕಡಬ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಪುತ್ತೂರಿಗೆ ಪುತ್ತಿಲ ಎಂಬ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ನಡೆಸಲಾಗಿದೆ.

ಅರುಣ್​ ಕುಮಾರ್​ ಪುತ್ತಿಲ
ಅರುಣ್​ ಕುಮಾರ್​ ಪುತ್ತಿಲ
author img

By

Published : Jun 25, 2023, 5:10 PM IST

Updated : Jun 25, 2023, 5:25 PM IST

ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ

ಕಡಬ(ದಕ್ಷಿಣ ಕನ್ನಡ): ಚುನಾವಣಾ ಸಮಯದಲ್ಲಿ ಕಾರ್ಯಕರ್ತರಿಗೆ ಅಪೇಕ್ಷೆಗಳು ಉಂಟಾಗುವುದು ಸಹಜ. ಪಕ್ಷ ಮತ್ತು ಸಂಘಟನೆಗಳಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಮುಂದಿನ ದಿನಗಳಲ್ಲಿ ಫಲ ಸಿಗುತ್ತದೆ ಎಂದು ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿ ಬೆಂಬಲಿಗರ ಬಳಗವು ಕಡಬ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಪುತ್ತೂರಿಗೆ ಪುತ್ತಿಲ ಎಂಬ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದ್ದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಎಂಪಿ ಅಭ್ಯರ್ಥಿಯಾಗಿ ತಾವು ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅರುಣ್​ ಕುಮಾರ್​ ಪುತ್ತಿಲ ಅವರು ಉತ್ತರಿಸಿದರು. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಬಿಜೆಪಿಯನ್ನು ಪ್ರಶ್ನಿಸುವಂತೆ ಮಾಡಿರುವ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದು, ಈ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಅಭಿಯಾನಗಳೂ ಆರಂಭವಾಗಿವೆ.

ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಹಾಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಗೆಲುವು ಕಷ್ಟವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ಈಗಾಗಲೇ ಕರಾವಳಿ ಭಾಗದಲ್ಲಿ ಆರಂಭಗೊಂಡಿವೆ. ಆದರೆ ಈವರೆಗೂ ಅರುಣ್ ಕುಮಾರ್ ಪುತ್ತಿಲ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ ಇಂದು ಕಾರ್ಯಕರ್ತರ ಅಪೇಕ್ಷೆಗೆ ಫಲ ಸಿಗುತ್ತದೆ ಎಂಬುದಾಗಿ ಮಾತ್ರ ಹೇಳಿಕೆಯನ್ನು ನೀಡಿದರು.

ಪುತ್ತಿಲ ಪರಿವಾರ ಸಂಘಟನೆ: ಟಿಕೆಟ್​ ನೀಡದ ಕಾರಣ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರಿನಲ್ಲಿ ದೊಡ್ಡ ಅಭಿಮಾನ ಬಳಗವೇ ಇದೆ. ಚುನಾವಣೆ ವೇಳೆ ಪುತ್ತೂರಿಗೆ ಪುತ್ತಿಲ ಎಂಬ ಘೋಷಣೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ತಾಲೂಕಿನಲ್ಲಿ ತೀವ್ರ ಪೈಪೋಟಿ ನೀಡಿದ್ದ ಅರುಣ್ ಕುಮಾರ್​ ಪುತ್ತಿಲ ಅವರು ಕೆಲವೇ ಕೆಲವು ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಅಶೋಕ್​ ರೈ ವಿರುದ್ಧ ಸೋತರು.

ಇದನ್ನೇ ಸವಾಲಾಗಿ ಸ್ವೀಕರಿಸಿದ ಪುತ್ತಿಲ ಅವರ ಬೆಂಬಲಿಗರು ಮುಂದಿನ ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಆಗಿ ಪುತ್ತಿಲ ಅವರನ್ನೇ ನಿಲ್ಲಿಸುವುದಾಗಿ ನಿರ್ಧರಿಸಿದ್ದರು. ಇನ್ನು ಮೊನ್ನೆ ತಾನೇ ಕಳೆದ ತಿಂಗಳು ಮೇನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮಾರುಗದ್ದೆಯಲ್ಲಿ ಸೇವಾ ಸಮರ್ಪಣಾ ಕಾರ್ಯಕ್ರಮದ ಜೊತೆಗೆ ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ಕಡೆಗೆ ಎಂಬ ಬೃಹತ್ ಪಾದಯಾತ್ರೆಯನ್ನು ಕೂಡ ನಡೆಸಲಾಗಿತ್ತು. ಅದೇ ದಿನದಂದು ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಂಘಟನೆ ಕುರಿತು ಓದು ಮುಂದುವರೆಸಲು ಈ ಲಿಂಕ್ ಬಳಸಿ- ಅರುಣ್ ಕುಮಾರ್ ಪುತ್ತಿಲರಿಂದ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಲೋಕಾರ್ಪಣೆ .

Last Updated : Jun 25, 2023, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.